ಬಂಟ್ವಾಳ: ಪ್ರಸಕ್ತ ವರ್ಷದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಡೆಂಗೆ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಯುವಲ್ಲಿ ಪ್ರತಿಯೊಬ್ಬ ನಾಗರಿಕರು ಕೂಡಾ ಸ್ವಯಂ ಜಾಗೃತರಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ನಾಗರಿಕರು ಕೈ ಜೋಡಿಸಬೇಕು ಎಂದು ರಾಯಿ ಸರ್ಕಾರಿ ಪ್ರಾತಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ರಾಮ್ರಾಜೇಶ್ ಹೇಳಿದ್ದಾರೆ.


ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಮಲೇರಿಯಾ ಮಾಸಾಚರಣೆ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಶಿಬಿರ’ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ರಾಯಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಅಂಗನವಾಡಿ ಕೇಂದ್ರ ಮೇಲ್ವಿಚಾರಕಿ ಕಾತ್ಯಾಯಿನಿ ಮತ್ತಿತರರು ಮಾತನಾಡಿದರು.
ಸಹಾಯಕ ಶುಶ್ರೂಷಕಿಯರಾದ ಗೀತಾ ಕರ್ಪೆ , ಸುನೀತಾ ರಾಯಿ, ಚಂದ್ರಪ್ರಭಾ ಅರಳ, ಪಾರ್ವತಿ ಅರಳ ಮತ್ತಿತರರು ಇದ್ದರು.
ಪ್ರಯೋಗಾಲಯ ತಂತ್ರಜ್ಞ ಬಸವರಾಜ್ ಸ್ವಾಗತಿಸಿ, ಸಹಾಯಕ ಶುಶ್ರೂಷಕಿ ಗೀತಾ ಕರ್ಪೆ ವಂದಿಸಿದರು.
