ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಗೊಂಡ ಅಭ್ಯರ್ಥಿಗಳ ಮನೆಗೆ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇಂದು ಬೇಟಿ ನೀಡಿದರು.
ಮಣಿನಾಲ್ಕೂರು ಗ್ರಾ.ಪಂಚಾಯತ್ನಲ್ಲಿ 13 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸೋಲು ಅನುಭವಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಕುಸುಮ ಡೀಕಯ್ಯ ಪೂಜಾರಿ, ಚಿತ್ರಾ ಚಂದಪ್ಪ ನಾಯ್ಕ, ರಾಜೇಶ್ ಶೆಟ್ಟಿ, ಗೀತ ಅಣ್ಣಿ ನಾಯ್ಕ, ಜನಾರ್ಧನ ನಾಯ್ಕ, ಲಲಿತ ನಾರಾಯಣ, ಶಶಿಕಾಂತ ಶೆಟ್ಟಿ, ಸಾಂತಪ್ಪ ಪೂಜಾರಿ, ರಜನಿ ಜಯಂತ, ಪುರುಷೋತ್ತಮ ಮಜಲು, ವಾಣಿ ಗಣೇಶ್, ವಿನೋದ್ ಕಡಮಜೆ ಮತ್ತು ಸರಪಾಡಿ ಗ್ರಾ.ಪಂ.ನಲ್ಲಿ ಸೋಲು ಅನುಭವಿಸಿದ ಮಂಜುಳ ಸಂಜೀವ, ಲೋಕೇಶ್ ಪೂಜಾರಿ ಹಾಗೂ ದೇವಸ್ಯ ಮೂಡೂರು ಗ್ರಾಮದ ರಾಮಕೃಷ್ಣ ಮಯ್ಯ ಶಾಂಭವಿ ಜಗದೀಶ ಪೂಜಾರಿ ಅವರ ಮನೆಗೆ ಬೇಟಿ ನೀಡಿ ಈ ಬಾರಿಯ ಗ್ರಾ.ಪಂನ ಸೋಲಿನ ಬಗ್ಗೆ ಕಾರಣಗಳನ್ನು ವಿಮರ್ಶೆ ಮಾಡಲಾಯಿತು. ಮುಂದೆ ಗೆಲುವು ಸಾಧಿಸಲು ಮಾಡಬೇಕಾದ ಜವಬ್ದಾರಿಯುತ ಕೆಲಸಗಳ ಬಗ್ಗೆ ಇದೇ ಸಂದರ್ಭ ಚರ್ಚೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ನಡೆಸಬೇಕು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಿ, ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿ , ಆ ಮೂಲಕ ಗ್ರಾಮದ ಜನರ ವಿಶ್ವಾಸ ಪಡೆದುಕೊಳ್ಳಿ ಎಂದು ರಾಜೇಶ್ ನಾಯಕ್ ಹೇಳಿದರು. ಈ ಸಂದರ್ಭ ಬಿ.ಜೆ.ಪಿ ಸದಸ್ಯರಾದ ದೇವದಾಸ ಶೆಟ್ಟಿ ದನಂಜಯ ಶೆಟ್ಟಿ, ಪೂವಪ್ಪ ಕಡಮಜೆ , ದರಣೇಂದ್ರ ಜೈನ್ ಮತ್ತು ವಿಶ್ವನಾಥ ನಾಯ್ಕ ಮತ್ತು ಪವನ್ ಹಾಜರಿದ್ದರು.




