ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಅಪರಿಚಿತ ಯುವಕನೊಬ್ಬ ನಿರಂತರವಾಗಿ ಮೊಬಲ್ ಸಂದೇಶ ರವಾನಿಸುತ್ತಿದ್ದಾನೆ ಎಂದು ಆರೋಪಿಸಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ಬಳಿಕ ಪರಸ್ಪರ ಘರ್ಷಣೆ ಉಂಟಾದ ಘಟನೆ ಸೋಮವಾರ ಸಂಜೆ ನಡೆದಿದೆ.

ಇಲ್ಲಿನ ಸರಕಾರಿ ಕಾಲೇಜೊಂದರ ವಿದ್ಯಾರ್ಥಿನಿಗೆ ಅಪರಿಚಿತ ಯುವಕನೊಬ್ಬ ಕಳೆದ ಕೆಲವು ಸಮಯದಿಂದ ನಿರಂತರ ಮೊಬೈಲ್ ಸಂದೇಶ ರವಾನಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿ ತನ್ನ ಸಹಪಾಠಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದು, ಸೋಮವಾರ ಸಂಜೆ ಆಕೆಯ ಮೊಬೈಲ್ನಿಂದಲೇ ಕರೆ ಮಾಡಿ ಕರೆಸಿಕೊಂಡ ತಂಡವು ಬಳಿಕ ಆತನಿಗೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಎರಡು ತಂಡಗಳು ಜಮಾಯಿಸಿ ಪರಸ್ಪರ ಮಾತುಕತೆ ಮತ್ತು ಘರ್ಷಣೆಗೆ ಮುಂದಾಗುತ್ತಿದ್ದಂತೆಯೇ ನಗರ ಠಾಣೆ ಪೊಲೀಸರು ಧಾವಿಸಿ ಗುಂಪು ಚದುರಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲಾಡಿ ನಿವಾಸಿ ಯಾಕೂಬ್ ಎಂಬವರ ಪುತ್ರ ಅಬ್ದುಲ್ ಮಜೀದ್ ಅವರು ಶಾರೂಕ್ ಕಾರಾಜೆ, ರಿಯಾಝ್ ಕಾರಾಜೆ, ನವಾಝ್ ಬೋಳಿಯಾರ್, ಸಹೀರ್ ಬೋಳಿಯಾರ್ ಮತ್ತಿತರ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *