ಬಂಟ್ವಾಳ : ಯೂತ್ ಕಾಂಗ್ರೆಸ್ ಮುರಬೈಲು-ಕಲ್ಲಡ್ಕ ಇದರ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವು ಕಲ್ಲಡ್ಕ ಪಾತಿಮಾ ಆರ್ಕೇಡ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.


ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಇರಾ ಗ್ರಾ.ಪಂ. ನೂತನ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಗೋಳ್ತಮಜಲು ವಲಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಣೈ, ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಕೆ. ಪದ್ಮನಾಭ ರೈ, ಪ್ರಮುಖರಾದ ಯಾಸಿರ್ ಕೆ.ಎಸ್. ಕಲ್ಲಡ್ಕ, ಇಂತಿಯಾಝ್ ಹಜಾಜ್ ಗೋಳ್ತಮಜಲು, ಜಲಾಲ್ ಕಲ್ಲಡ್ಕ, ಜಿ.ಎಸ್. ಸಿದ್ದೀಕ್ ಕಲ್ಲಡ್ಕ, ಶಾಫಿ ಇಸ್ಮಾಯಿಲ್ ಕಲ್ಲಡ್ಕ ಮೊದಲಾದವರು ಭಾಗವಹಿಸಿದ್ದರು.
