ಬಂಟ್ವಾಳ; ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸರ್ಕಾರದ ಸ್ಪಷ್ಟ ಭಾಷಾಧೋರಣೆಯೂ ಅಡಕವಾಗಲಿ ಎಂದು ಶಿಕ್ಷಣ ತಜ್ಞ ಡಾ.ಸುಕುಮಾರ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ನೌಕರರ ಸಂಘ, ಬಂಟ್ವಾಳ ಘಟಕ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇವರ ಸಹಯೋಗದಲ್ಲಿ ಸೋಮವಾಋ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2015ರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಶಿಕ್ಷಣ ಕೇವಲ ಅಂಕಕ್ಕೇ ಸೀಮಿತವಾಗುತ್ತಿದ್ದು, ಬಾಯಿಪಾಠಕ್ಕೆ ಹೆಚ್ಚಿನ ಒತ್ತು ಸಿಗುತ್ತಿದೆ, ಈ ನಿಟ್ಟಿನಲ್ಲಿ ಬಾಯಿಪಾಠಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದ ಅವರು, ಅಂಕಕ್ಕೆ ಪೂಜೆ ಮಾಡುವುದಕ್ಕಿಂತಲೂ ಮುಖ್ಯವಾಗಿ ಕಲಿಕಾ ಗುಣಮಟ್ಟದ ಬಗ್ಗೆ ಭಕ್ತಿ ಇರಲಿ ಎಂದು ಆಶಯ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ನೀಡುವ ಶಿಕ್ಷಣ ತರಬೇತಿಯಲ್ಲಿಯೂ ಮಹತ್ತರ ಬದಲಾಗಬೇಕು ಎಂದ ಅವರು, ಮಗುವಿನ ಪ್ರಪಂಚ ನಾಳೆ ಅಲ್ಲ, ಇಲ್ಲಿ ಮತ್ತು ಈಗ ಎಂಬುದನ್ನು ಅರಿತುಕೊಂಡು ಶಿಕ್ಷಣದ ಉದ್ದೇಶಗಳು ಸಾಕಾರಗೊಳ್ಳಬೇಕಿದೆ ಎಂದರು.
ವೆಲೊರೆಡ್ ನಿರ್ದೇಶಕ ರೆನ್ನಿಡಿಸೋಜ ಮಾತನಾಡಿ, ಶಿಕ್ಷಣ ಪದ್ದತಿ, ಪಠ್ಯಕ್ರಮ ಮಗುವಿನ ಸುಂದರ ಭವಿಷ್ಯವನ್ನು ಕಟ್ಟಿಕೊಡುವಂತಿರಬೇಕು ಎಂದು ಅಭಿಪ್ರಾಯಿಸಿದರು.ಮಂಗಳೂರು ಡಯಟ್ ಪ್ರಾಂಶುಪಾಲ ಸಿಫ್ರಿಯನ್ ಮೊಂತೆರೋ, ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಉಪಯೋಜನ ಸಮನ್ವಯಾಧಿಕಾರಿ ಗೀತಾ, ಹಿರಿಯ ಉಪನ್ಯಾಸಕಿ ಆಶಾ, ಜಯಲಕ್ಷ್ಮೀ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ಕೋಟ್ಯಾನ್, ರೋಟರಿ ಕ್ಲಬ್ ಕಾರ್ಯದರ್ಶಿ ರಿತೇಶ್ ಬಾಳಿಗ, ಕ್ಷೇತ್ರ ಸಮನ್ವಯಾಧಿಕಾರಿ ರಾಜೇಶ್. ಪುತ್ತೂರು ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ತಾಲೂಕಿನ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ರಮೇಶ್ ನಾಯಕ್ ರಾಯಿ, ಶಿವಪ್ರಸಾದ್, ಜೋಯಲ್ ಲೋಬೋ, ರಾಮಚಂದ್ರ ರಾವ್ , ಸಮುದಾಯ ಆರೋಗ್ಯ
ಟ್ರಸ್ಟ್ ನ ಜಗನ್ನಾಥ್ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಸ್ವಾಗತಿಸಿದರು. ನಾರಾಯಣ ಗೌಡ ಕಾರ್ಯಕ್ರಮ ನಿರೂಪಿಸಿದರು.
