ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಆಶ್ರಯದ ರಂಗಿನ ಮನೆ ಟೆಲಿಫಿಲ್ಮ್‍ಗೆ ಜು. 5ರಂದು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಪ್ರಹ್ಲಾದ ಮಂಟಪದಲ್ಲಿ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಕೆಮರಾ ಚಾಲನೆ ಮೂಲಕ ಮುಹೂರ್ತ ನೆರವೇರಿಸಿದರು.
ಟೆಲಿಫಿಲ್ಮ್ ಮೂಲಕ ಟ್ರಸ್ಟ್ ಸ್ಥಾಪಕರು,ನಿರ್ಮಾಪಕರಾದ ಮೋಹನದಾಸ ಕೊಟ್ಟಾರಿ ಅವರ ಸಾಧನೆ, ಪ್ರಯತ್ನಗಳಿಗೆ ಯಶಸ್ಸು ದೊರಕಲಿ. ಸಾಮಾನ್ಯ ಮಟ್ಟದಿಂದ ಹೆಸರುವಾಸಿ ಕಲಾವಿದರಾಗಿ ಇಂದು ನಾಡಿನಾದ್ಯಂತ ಹೆಸರು ಮಾಡಿರುವ ಅವರ ಟೆಲಿಫಿಲ್ಮ್ ರಾಜ್ಯ ರಾಷ್ಟ್ರದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.
ಮೊಗರ್ನಾಡು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಜನಾರ್ಧನ ಭಟ್ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
0507bteph7
ಭಗವಂತ ಟೆಲಿಫಿಲಂ ತಂಡಕ್ಕೆ ಕೀರ್ತಿಯನ್ನು ತಂದುಕೊಡಲಿ, ಯಶಸ್ಸು ದೊರಕಲಿ, ಭಗವಂತನ ಆಶೀರ್ವಾದ ಇರಲಿ ಎಂದು ಹಾರೈಸಿದರು.
ನಾಟಕ ಅಥವಾ ಯಾವುದೇ ಕಲೆಯನ್ನು ಅಭ್ಯಾಸ ಮಾಡಿ, ತಾನು ಕಂಡದ್ದನ್ನು, ಅಭ್ಯಾಸ ಮಾಡಿದ್ದನ್ನು ಇತರರಿಗೆ ತಿಳಿಸುವ, ಕಲಿಸುವ ಪ್ರಯತ್ನ ಮಾಡುತ್ತಿರುವ ಮೋಹನ್‍ದಾಸ ಕೊಟ್ಟಾರಿಯವರ ಪ್ರಯತ್ನವು ಶ್ಲಾಘನೀಯ, ಅವರ ತಂಡ ಇಂದು ನಾಡಿನಲ್ಲಿ ಹೆಸರು ಮಾಡಿದೆ. ಇನ್ನಷ್ಟು ಬೆಳಗಿ ಬರಲಿ ಎಂದು ಆಶೀರ್ವದಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ತಂಡವು ತನ್ನ ಚಿತ್ರದ ಮೂಲಕ ರಾಜ್ಯ ರಾಷ್ಟ್ರದಲ್ಲಿ ಗುರುತಿಸಿಕೊಳ್ಳಲಿ. ಯಶಸ್ಸು ಅವರಿಗೆ ಸಿಗಲಿ. ಅದರ ಮೂಲಕ ನಮ್ಮ ಜಿಲ್ಲೆಯ ಕಲಾವಿದರೊಬ್ಬರು ದೊಡ್ಡ ಮಟ್ಟಕ್ಕೆ ಏರುವ ಸಂತಸ ನಮಗಾಲಿ ಎಂದು ಹರಸಿದರು.
ವೇದಿಕೆಯಿಂದ ಮೊಗರ್ನಾಡು ಶ್ರೀ ಮಹಾಗಣಪತಿ ದೇವಸ್ಥಾನದ ಶ್ರೀನಿವಾಸ ಐತಾಳ, ಕಲಾವಿದ ಮಂಜು ವಿಟ್ಲ, ನ್ಯಾಯವಾದಿ ಪಿ. ಜಯರಾಮ ರೈ, ಕರ್ನಾಟಕ ಸರಕಾರ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ತಾರಾನಾಥ ವರ್ಕಾಡಿ, ತಾ.ಪಂ. ಸದಸ್ಯ ಆನಂದ ಎ. ಶಂಭೂರು, ರಂಗಿನ ಮನೆ ಚಿತ್ರ ನಿರ್ದೇಶಕ ಜಯಪ್ರಕಾಶ್, ಪತ್ರಕರ್ತ ರಾಜಾ ಬಂಟ್ವಾಳ ಸಭೆ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ, ಯಕ್ಷಗಾನದ ಮೇರು ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ,ಉದ್ಯಮಿ ಉಮೇಶ ಬೋಳಂತೂರು, ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಪುರುಷೋತ್ತಮ ಸಾಲಿಯಾನ್, ರಘವೀರ ಆಲಾಡಿ, ಚಿತ್ರನಟಿ ಅನುಷಾ ಕೋಟ್ಯಾನ್, ಬಿ.ಸಿ.ರೋಡ್ ಭಾರತಿ ಕಲಾ ಆಟ್ರ್ಸ್ ಮಾಲಕ ರಾಘವದಾಸ್ ಬಿ.ಸಿ.ರೋಡ್,, ಸಂಸ್ಥೆಯ ಸಲಹಾಗಾರ, ತುಳು ಸಾಹಿತ್ಯ ಆಕಾಡೆಮಿ ಸದಸ್ಯ ಡಿ.ಎಂ. ಕುಲಾಲ್ ಮೊದಲಾದವರು ಮತ್ತು ತಂಡದ ಪ್ರಮುಖರು ಉಪಸ್ಥಿತರಿದ್ದರು.
ಚಿಣ್ಣರಲೋಕ ಮೋಕೆದ ಕಲಾವಿದೆರ್ ಸಂಸ್ಥಾಪಕ ಮೋಹನದಾಸ ಕೊಟ್ಟಾರಿ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ನಾರಾಯಣ ಸಿ. ಪೆರ್ನೆ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *