ಸುದ್ದಿ9ಕೈಕಂಬ: ದಕ್ಷಣ ಕನ್ನಡ ಜಿಲ್ಲಾ ಪಂಚಾಯತ್ ಗುರುಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದದಸ್ಯೆ, ಕಾಂಗ್ರೆಸ್ ಮುಖಂಡೆ ಯಶವಂತಿ ಆಳ್ವ(62) ಅವರು ಹೃದಯಾಘಾತಕ್ಕೊಳಗಾಗಿ ವಿಧಿವಶರಾದ ಘಟನೆ ನಡೆದಿದೆ. ಗಂಜಿಮಠ ಸಮೀಪದ ಮುತ್ತೂರು ಎಂಬಲ್ಲಿನ ನಿವಾಸಿಯಾಗಿರುವ ಇವರು ಕದ್ರಿಯ ಶಿವಭಾಗ್ ಎಂಬಲ್ಲಿ ತನ್ನ ಮಗನ ಜೊತೆಯಲ್ಲಿದ್ದರು. ಆದರೆ ಭಾನುವಾರ ತಡರಾತ್ರಿ ತೀವ್ರವಾದ ಹೃದಯಾಘಾತಕ್ಕೊಳಗಾಗಿ ತನ್ನ ಸ್ವಗೃಹದಲ್ಲಿ ನಿಧರಾದರೆಂದು ಅವರ ಕುಟುಂಬ ಮೂಗಳು ತಿಳಿಸಿವೆ.

6 vp yasavanthi alva
ಗಂಜಿಮಠ ಪಂಚಾಯತ್ ಸದಸ್ಯರಾಗಿ ತನ್ನ ರಾಜಕೀಯ ಜೀವನವನ್ನು ಆರಂಭಿಸಿದ ಯಶವಂತಿ ಆಳ್ವ ಅವರು 1985-86 ಸಾಲಿನ ಜಿಲ್ಲಾ ಪರಿಷತ್ ಇದ್ದ ಸಂದರ್ಭದಲ್ಲೇ ಆಯ್ಕೆಯಾಗಿದ್ದರು. ಆಮೇಲೆ ಜಿಲ್ಲಾ ಪರಿಷತ್ ಜಿಲ್ಲಾ ಪಂಚಾಯತ್ ಆಗಿ ಬದಲಾಗಿದ್ದು ಮತ್ತೆ 3 ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದರು.

ಕಳೆದ ಬಾರಿ ಜಿಲ್ಲಾ ಪಂಚಾಯತ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದು,  ಪ್ರಚಂಡ ಮತಗಳಿಂದ ಬಿಜೆಪಿ  ಎದುರು ಗೆದ್ದಿದ್ದರು. ಸ್ಥಳೀಯ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸಿದ್ದ ಇವರನ್ನು ಜನರು ಪ್ರೀತಿಯಿಂದ `ಯಶವಂತಿ ಅಕ್ಕೆ’ ಎನ್ನುತ್ತಿದ್ದರು. ಜಿಲ್ಲಾ ಪಂಚಾಯತ್ ವತಿಯಿಂದ ಹಲವಾರು ಗ್ರಾಮಗಳಿಗೆ ಹೆಚ್ಚು ಅನುದಾನ ತೆಗೆಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ವ್ಯಾಪ್ತಿಗೊಳಪಟ್ಟ ಗಂಜಿಮಠ, ಮೂಡುಪೆರಾರ, ಕಂದಾವರ, ಅಡ್ಡೂರು, ಗುರುಪುರ ಮುಂತಾದ ಪ್ರದೇಶಗಳಿಲ್ಲಿ ರಸ್ತೆ ನಿರ್ಮಿಸಿ  ಜನರಿಗೆ ಹತ್ತಿರವಾಗಿದ್ದರು.

ಆದರೆ ಇತ್ತೀಚೆಗೆ ಕೆಲವು  ಸಮಯಗಳಿಂದ ಹೃದಯ ಸಮಸ್ಯೆಗೊಳಗಾಗಿದ್ದ ಯಶವಂತಿ ಆಳ್ವ ಅವರು ಅದಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ನಿನ್ನೆ ಹಠಾತ್ ಹೃದಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅವರ ಅಂತಿಮ ದರ್ಶನಕ್ಕೆ ಅವರ ಸ್ವಗೃಹವಾದ ಶಿವಭಾಗ್ನಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯ್ದೀನ್ ಬಾವಾ, ಜೆ.ಆರ್ ಲೋಬೋ ಆಶಾ ತಿಮ್ಮಪ್ಪ ಗೌಡ, ಮೇಯರ್ ,ಮಾಜಿ ಮೇಯರ್, ಪಂಚಾಯತ್ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್, ತಾ.ಪಂ., ಗ್ರಾ.ಪಂ. ಸದಸ್ಯರು, ಪಕ್ಷದ ಕಾರ್ಯಕರ್ತರು ಮುಂತಾದವರು ಆಗಮಿಸಿದ್ದರು. ಮಂಗಳೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.  ಮೃತರು ಇಬ್ಬರು ಹೆಣ್ಣು ಹಾಗೂ ಒಬ್ಬ ಗಂಡು ಮಗನನ್ನು ಅಗಲಿದ್ದಾರೆ

 

 

 

By Suddi9

Leave a Reply

Your email address will not be published. Required fields are marked *