ಬಂಟ್ವಾಳ: ಲೋಕೋಪಯೋಗಿ ಇಲಾಖೆಯ 2014-15ನೇ ಸಾಲಿನ ಅಪೆಂಡಿಕ್ಸ್ – ಇ ಯೋಜನೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಹಾಗೂ ಸೇತುವೆ ಕಾಮಗಾರಿಗಳಿಗೆ ಒಟ್ಟು ರೂ.15 ಕೋಟಿ ಅನುದಾನ ಮಂಜೂರಾಗಿದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೈಕಂಬ ಪೇಟೆ ಭಾಗ ಅಗಲೀಕರಣ ಹಾಗೂ ಅಭಿವೃದ್ಧಿಗೆ ರೂ.30 ಲಕ್ಷ, ಬಂಟ್ವಾಳ ತಾಲೂಕಿನ ಮೊಡಂಕಾಪು ಪೇಟೆ ಭಾಗದ ಅಗಲೀಕರಣ ಹಾಗೂ ಅಭಿವೃದ್ಧಿಗೆ ರೂ.1 ಕೋಟಿ 35ಲಕ್ಷ, ಮೆಲ್ಕಾರ್ನಿಂದ ಮಾರ್ನಬೈಲ್ ರಸ್ತೆ ಅಗಲೀಕರಣ ಹಾಗೂ ಜಂಕ್ಷನ್ ಅಭಿವೃದ್ಧಿಗೆ ರೂ.2ಕೋಟಿ, ಬಂಟ್ವಾಳ ತಾಲೂಕಿನ ವಗ್ಗ – ಉಳಿ ರಸ್ತೆಯ ಅಗಲೀಕರಣ ಹಾಗೂ ಅಭಿವೃದ್ಧಿಗೆ ರೂ.4ಕೋಟಿ 15 ಲಕ್ಷ, ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪೇಟೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣಕ್ಕೆ ರೂ.1ಕೋಟಿ, ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣಕ್ಕೆ ರೂ.4ಕೋಟಿ ಹಾಗೂ ಕಡಂಬು ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ರೂ.1ಕೋಟಿ, ವಾಮದಪದವು – ಮಣಿಹಳ್ಳ ರಸ್ತೆಯಲ್ಲಿ ಎರಡು ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಗೆ ರೂ.1 ಕೋಟಿ 20 ಲಕ್ಷ, ಅನುದಾನ ಮಂಜೂರಾಗಿದೆ.
