ಸುದ್ದಿ9 ಕಿನ್ನಿಗೋಳಿ; ಕಿನ್ನಿಗೋಳಿ ಸಮೀಪದ ಕೊಂಡಿಪಲ್ಕೆ ತುಡಾಮ ಎಂಬಲ್ಲಿ ವಿನ್ಸೆಂಟ್ ಸಿಕ್ವೇರಾ ಎಂಬವರ ಬಾವಿಯಲ್ಲಿ ಬೆಳಗಿನ ಜಾವ ಪುನುಗು ಬೆಕ್ಕು ಬಿದ್ದು ಮೃತ ಪಟ್ಟಿದೆ.
ಅಳಿಯುತ್ತಿರುವ ಸಂತತಿಯಾದ ಈ ವಿಶಿಷ್ಟ ಪ್ರಾಣಿ ಮುಂಗುಸಿಗಳ ಕುಟುಂಬಕ್ಕೆ ಸೇರಿದ ನಿಶಾಚರಿ ಮತ್ತು ಸಸ್ತನಿ. ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣಗಳನ್ನು ಹೊಂದಿದ್ದು ಮೈ ಮೇಲಿನ ಉಣ್ಣೆಗರಿ ಕಂದು ಅಥವಾ ಬೂದು ಬಣ್ಣದ ಆಕಾರದಲ್ಲಿದೆ. ಮೈಮೇಲೆ ವಿವಿಧ ಆಕಾರದ ಪಟ್ಟಿಗಳನ್ನು ಹೊಂದಿದೆ.
