ಮೂಡುಬಿದಿರೆ: ಶಿರ್ತಾಡಿ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲತಾ ಹೆಗ್ಡೆ ಹಾಗೂ ಅದೇ ಪಕ್ಷದ ಬೆಂಬಲಿತ ಉಪಾಧ್ಯಕ್ಷರಾಗಿ ರಾಜೇಶ್ ಸುವರ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
. ರಾಜೇಶ್ ಸುವರ್ಣ, . ಲತಾ ಹೆಗ್ಡೆ
ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಶ್ರೀಕಾಂತ್ ರಾವ್ ಚುನಾವಣಾಧಿಕಾರಿಯಾಗಿದ್ದರು. ಬಿಜೆಪಿ ಬೆಂಬಲಿತ 9 ಸದಸ್ಯರ ಉಪಸ್ಥಿತಿಯಲ್ಲಿ, ಕಾಂಗ್ರೆಸ್ನ 6 ಅಭ್ಯರ್ಥಿಗಳ ಅನುಪಸ್ಥಿತಿಯಲ್ಲಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಪಕ್ರಿಯೆ ನಡೆಯಿತು. ಅಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಮೀಸಲಾಯಿತಿಯಂತೆ ಲತಾ ಹೆಗ್ಡೆ ಆಯ್ಕೆಯಾದರು. ಹಿಂದುಳಿದ ಎ ವರ್ಗದ ಮೀಸಲಾಯಿತಿಯಂತೆ ರಾಜೇಶ್ ಸುವರ್ಣ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷೆ ಲತಾ ಹೆಗ್ಡೆ ಮಾತನಾಡಿ, ಪಕ್ಷಬೇಧವಿಲ್ಲದೇ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಭೃಷ್ಟಾಚಾರರಹಿತ, ಪ್ರಾಮಾಣಿಕ ಆಡಳಿತಕ್ಕೆ ಆದ್ಯತೆ ನೀಡುತ್ತೇನೆ ಎಂದರು.
