ಮೂಡುಬಿದರೆ: ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ಸಮಬಲ ಕಾಯ್ದಿರಿಸಿಕೊಂಡಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನ ಬಿಜೆಪಿ ಬೆಂಬಲಿತರ ಪಾಲಾಗಿದೆ.

IMG-20150702-WA0034
ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತರು 6 ಹಾಗೂ ಬಿಜೆಪಿ ಬೆಂಬಲಿತರು 6 ಸ್ಥಾನದಿಂದ ಸಮಬಲ ಸಾಧಿಸಿದ್ದವು. ಅಧ್ಯಕ್ಷರ ಆಯ್ಕೆಗೆ ಎಸ್ಸಿ ಮಹಿಳಾ ಮೀಸಲಾಯಿದ್ದ ಕಾರಣ ಯಾವುದೇ ಗೊಂದಲವಿಲ್ಲದೆ ಬಿಜೆಪಿ ಬೆಂಬಲಿತ ಯಮುನಾ ಆಯ್ಕೆಯಾದರು. ಉಪಾಧ್ಯಕ್ಷ ಆಯ್ಕೆಯಲ್ಲಿ ಸಾಮಾನ್ಯ ಮೀಸಲಾಯಿತಿಯಿದ್ದು, ಚುನಾವಣೆಯ ಮೂಲಕ ಆಯ್ಕೆ ನಡೆಯಿತು. ಚುನಾವಣೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ನ ಒಬ್ಬರು ಅಭ್ಯರ್ಥಿ ಗೈರಾಗಿದ್ದ ಕಾರಣ, ಬಿಜೆಪಿಯ ಅಭ್ಯರ್ಥಿ  ಮುನಿರಾಜ್ ಹೆಗ್ಡೆ 6 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ನ ಪ್ರಶಾಂತ್ 5 ಮತಗಳನ್ನು ಪಡೆದು ಪರಾಭವಗೊಂಡರು.
ಬಿಜೆಪಿ ವಿಜಯೋತ್ಸವ:
ಧರೆಗುಡ್ಡೆ ಪಂಚಾಯಿತಿಯಲ್ಲಿ ತಮ್ಮ ಪಕ್ಷದ ಬೆಂಬಲಿತ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಐಕರ್ತರು ಗುರುವಾರ ವಿಜಯೋತ್ಸವ ಆಚರಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಶಿರ್ತಾಡಿ ಶಕ್ತಿ ಕೇಂದ್ರದ ಸಂಚಾಲಕ ಶ್ರೀನಾಥ, ಸಹಸಂಚಾಲಕ ಸುಕೇಶ್, ಬಿಜೆಪಿ ಮುಖಂಡರಾದ ಸುದರ್ಶನ.ಎಂ,ಶಮಿತ್ ರಾಜ್, ಗೋಪಾಲ ಶೆಟ್ಟಿ, ಜಗದೀಶ್ ಕೋಟ್ಯಾನ್, ಸಂತೋಷ್ ಹಾಗೂ ವಿಜೇತ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *