ಡಿ.12: ಮೂಡುಬಿದಿರೆಯಲ್ಲಿ `ಮಾಧವಿ’ ಯುಗಳ ನಾಟಕ
ಮೂಡುಬಿದಿರೆ: ಕೈವಲ್ಯ ಕಲಾಕೇಂದ್ರ ಬೆಂಗಳೂರು ಇವರು ಮೂಡುಬಿದಿರೆ ಸಮಾಜಮಂದಿರದ ಜನತಾ ಹಾಲ್‌ನಲ್ಲಿ ಡಿ.12 ಸಾಯಂಕಾಲ 6ರಿಂದ 7ರವರೆಗೆ `ಮಾಧವಿ’ ಯುಗಳ ನಾಟಕ (ರಂಗ ಪಠ್ಯ: ಸುಧಾ ಅಡುಕಳ, ನಿರ್ದೇಶನ: ಶ್ರೀಪಾದ ಭಟ್, ಸಹನಿರ್ದೇಶನ: ಗಣೇಶ ಎಂ. ಭೀಮನಕೋಣೆ) ಪ್ರದರ್ಶಿಸಲಿದ್ದಾರೆ.

ಶರತ್ ಬೋಪಣ್ಣ ಮತ್ತು ದಿವ್ಯಶ್ರೀ ನಾಯಕ್ ಸುಳ್ಯ ಪ್ರಸ್ತುತಪಡಿಸುವ ಈ ನಾಟಕಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಚದುರಂಗ ಮೂಡುಬಿದಿರೆ ಪ್ರಕಟನೆಯಲ್ಲಿ ತಿಳಿಸಿದೆ.