ಮೂಡುಬಿದರೆ: ಮೂಡುಬಿದರೆ ಪುರಸಭಾ ವ್ಯಾಪ್ತಿಯ ಪೇಪರ್ ಮಿಲ್ ಬಳಿ ಗುರುವಾರ ಶಾಲಾ ಮಕ್ಕಳಿದ್ದ ಆಟೋ ರಿಕ್ಷಾ ಪಲ್ಟಿಯಾಗಿದ್ದು, 5 ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಆಟೋ ಚಾಲಕ ಸುರೇಶ್ ಎಂಬವರು ಬಿರಾವು ಶಾಂತಿಪಲ್ಕೆಯಿಂದ ಪ್ರಾಂತ್ಯ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುವಾಗ ಘಟನೆ ಸಂಭವಿಸಿದೆ. ಆಟೋ ಎದರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೋಡೆಯುದನ್ನು ತಪ್ಪಿಸಲು ಚಾಲಕ ರಸ್ತೆಯಿಂದ ಕೆಳಗೆ ಇಳಿಸಲು ಪ್ರಯತ್ನಿಸಿದ್ದಾಗ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಸಾಂದರ್ಬಿಕ ಚಿತ್ರ
ಆಟೋ ಪಲ್ಟಿಯಾದ ಸಂದರ್ಭ 9ನೇ ತರಗತಿಯ ಸೂರಜ್, 7ನೇ ತರಗತಿಯ ಸುರಕ್ಷಿತಾ, 6ನೇ ತರಗತಿಯ ಭವ್ಯ, 4ನೇ ತರಗತಿಯ ಆದರ್ಶ, ಶುಭಲತಾ ಹಾಗೂ ಒಂದನೇ ತರಗತಿಯ ಪೂರ್ಣೇಶ್ ಗಾಯಗೊಂಡು ಮೂಡುಬಿದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸುರೇಶ್ ಪರವಾನಿಗೆ ಇಲ್ಲದೆ ಆಟೋ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಮೂಡುಬಿದರೆ ಪುರಸಭಾ ಮಾಜಿ ಸದಸ್ಯ ಅನಿಲ್ ಲೋಬೋ ಆಗಮಿಸಿ ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಆಸ್ಪತ್ರೆಗೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಭೇಟಿ ನೀಡಿದರು
