ಮೂಡುಬಿದಿರೆ: 500 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಯಕ್ಷಗಾನ, ಶಾಸ್ತ್ರೀಯತೆ ಹೋಲಿಕೆಯಿರುವ ಜಾನಪದೀಯ ಕಲೆ. ಯಕ್ಷಗಾನವನ್ನು ಸರಿಯಾದ ರೀತಿಯಲ್ಲಿ ದಾಖಲೀಕರಿಸಿದರೆ ಮುಂದಿನ ಪೀಳಿಗೆಗೆ ಯಾವುದೇ ಅಡಚಣೆಯಿಲ್ಲದೆ ತಲುಪುತ್ತದೆ. ಕೇರಳ ಸರ್ಕಾರವು ಕಥಕಳಿ ಹಾಗೂ ಮೋಹಿನಿಯಾಟ್ಟಂ ಅನ್ನು ರಾಜ್ಯ ಕಲೆ ಎಂದು ಘೋಷಿಸಿದ ರೀತಿ, ರಾಜ್ಯ ಸರ್ಕಾರ `ಯಕ್ಷಗಾನ’ ಕಲೆಯನ್ನು ಕರ್ನಾಟಕದ ರಾಜ್ಯ ಕಲೆ ಎಂದು ಘೋಷಿಸಲಿ ಎಂದು ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಆಭಿಪ್ರಾಯ ವ್ಯಕ್ತಪಡಿಸಿದರು.
mbd_july1_6
ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ವತಿಯಿಂದ 5 ದಿನಗಳ ಕಾಲ ನಡೆಯಲಿರುವ 18 ನೇ ವರ್ಷದ ಯಕ್ಷಾಯನ, ಯಕ್ಷಗಾನ-ವೈವಿದ್ಯ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಪದ್ಮಾವತಿ ಕಲಾಮಂದಿರದಲ್ಲಿ ಚಾಲನೆ ನೀಡಿ ಮಾತನಾಡಿದರು.
ಜಾನಪಾದೀಯ, ಶಾಸ್ತ್ರೀಯ ಕಲೆಗಳು ನಶಿಸಿಹೋಗುವುದಿಲ್ಲ. ಆದರೆ ಮುಂದಿನ ಪಿಳೀಗೆಗೆ ಸರಿಯಾದ ರೀತಿಯಲ್ಲಿ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಯಕ್ಷಗಾನವನ್ನು ವಿಕೃತಗೊಳಿಸುವ ಪ್ರಯತ್ನಗಳನ್ನು ತಡೆಯಬೇಕು. ಸರ್ಕಾರ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಬದಲಾವಣೆಯೊಂದಿಗೆ ಹೊಸ ಸಾಧ್ಯತೆಗಳನ್ನು ಸೃಷ್ಠಿಸುತ್ತಿರುವ ಕಲೆ ಯಕ್ಷಗಾನದಲ್ಲಿ ಮಹಿಳೆಯರು ಮಿಂಚುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.

ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ವೇ.ಮೂ. ಈಶ್ವರ ಭಟ್ ಆಶೀರ್ವಚನ ನೀಡಿದರು. ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ  ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.ಕೆ.ವಿ ರಮಣ್ ಅರ್ಚಕ ಅಲಂಗಾರು ದಿ.ಸೀತಾರಾಮ ಭಟ್(ಕಾಳು ಭಟ್) ಸಂಸ್ಮರಣ ಭಾಷಣ ಮಾಡಿದರು.
ಮಂಗಳೂರು ಎಂಆರ್ಪಿಎಲ್ ಡೆಪ್ಯುಟಿ ಮೆನೇಜರ್ ಲಕ್ಷ್ಮೀ ಕುಮಾರನ್, ಮಂಗಳೂರು ವಿಮಾನ ನಿಲ್ದಾಣ ಮಾಜಿ ನಿರ್ದೇಶಕ ಎಂ.ಆರ್ ವಾಸುದೇವ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಪೃಥ್ವೀರಾಜ್ ಎಡಪದವು, ಎಂಐಟಿ ಪ್ರಾಧ್ಯಾಪಕ ಉದಯ ಕುಮಾರ್ ಶೆಟ್ಟಿ, ಪಡುಬಿದ್ರೆ ಸ್ಥಾನಿಕ ಬ್ರಾಹ್ಮಣ ಸಭಾದ ನಿರ್ದೇಶಕ ದಿವಾಕರ್ ರಾವ್, ರಂಗಸಜ್ಜಿಕೆ, ಬೆಳಕು ಹಾಗೂ ಧ್ವನಿವರ್ಧಕ ವ್ಯವಸ್ಥೆ ಮಾಡಿದ ರಾಮಕೃಷ್ಣ ಭಟ್(ಆರ್.ಕೆ ಭಟ್) ಹಾಗೂ ಪ್ರಸ್ತುತ ಕಾರ್ಯಕ್ರಮದ ಮೊದಲ ಯಕ್ಷಗಾನದ ಪ್ರಾಯೋಜಕರಾದ ರಮೇಶ್ ಭಟ್ ಕದ್ರಿ ಅವರನ್ನು ಗೌರವಿಸಲಾಯಿತು. ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸ್ವಾಗತಿಸಿದರು.
ಗೌರವಾಧ್ಯಕ್ಷ ಶ್ರೀಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು. ರವಿ ಪ್ರಸಾದ್ ಶೆಟ್ಟಿ ವಂದಿಸಿದರು.

By Suddi9

Leave a Reply

Your email address will not be published. Required fields are marked *