ಮೂಡುಬಿದಿರೆ : ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಇರುವೈಲ್ ಗ್ರಾ.ಪಂ.ನ ನೂತನ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತರಾದ ತೋಡಾರು ವಾರ್ಡ್ ನವೀನಾ ವಿಠಲ ಪೂಜಾರಿ, ಉಪಾಧ್ಯಕ್ಷೆಯಾಗಿ ಬ್ರಿಜಿತ್ ವಲೇರಿಯನ್ ಕುಟಿನ್ಹಾ ಆಯ್ಕೆಯಾಗಿದ್ದಾರೆ.

ಹೊಸಬೆಟ್ಟು ಗ್ರಾ.ಪಂ ಕಚೇರಿಯಲ್ಲಿ ಬುಧವಾರ ಸಂಜೆ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 14 ಹಾಗೂ ಕಾಂಗ್ರೆಸ್ ಬೆಂಬಲಿತ 1 ಅಭ್ಯರ್ಥಿಗಳು ಸದಸ್ಯರಾಗಿ ಆಯ್ಕೆಯಾಗಿದ್ದು, ಬಿಜೆಪಿ ಬೆಂಬಲಿತರು ಸ್ಪಷ್ಟ ಬಹುಮತದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಬುಧವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣೆ ಅಧಿಕಾರಿಯಾಗಿ ಕಾರ್ತಿಕ್ ಕರ್ತವ್ಯ ನಿರ್ವಹಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಇರುವೈಲ್ ಅಧ್ಯಕ್ಷೆ ನವೀನಾ ವಿಠಲ ಪೂಜಾರಿ, ಜನರ ಸೇವೆ ಮಾಡಲು ಅವಕಾಶ ನೀಡಿದ ಬಿಜೆಪಿ ಪಕ್ಷದ ಎಲ್ಲ ಹಿರಿಯರಿಗೆ ಚಿರಋಣಿ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಪುತ್ತಿಗೆ ಶಕ್ತಿ ಕೆಂದ್ರದ ಅಧ್ಯಕ್ಷ ಅಜಯ್ ರೈ, ಇರುವೈಲ್ ಗ್ರಾ.ಪಂ ಹಿರಿಯ ಸದಸ್ಯರಾದ ವಲೇರಿಯನ್ ಕುಟಿನ್ಹಾ, ಎಂ.ಎ.ರಜಾಕ್, ಬಿಜೆಪಿ ಮುಖಂಡರಾದ ಸುದರ್ಶನ್ ಎಂ, ಶಾಂತಿ ಪ್ರಸಾದ್ ಹೆಗ್ಡೆ, ಬಾಹುಬಲಿ ಪ್ರಸಾದ್, ತೋಡಾರು ಸ್ಥಾನೀಯ ಬಿಜೆಪಿ ಅಧ್ಯಕ್ಷ ರಂಜಿತ್ ಪೂಜಾರಿ, ಇರುವೈಲು ಸ್ಥಾನೀಯ ಅಧ್ಯಕ್ಷೆ ನಾಗೇಶ್ ನಾಯಕ್ ಮೊದಲಾದವರಿದ್ದರು.
