ಮೂಡುಬಿದಿರೆ: ಇಲ್ಲಿಗೆ ಸಮೀಪದ ಬಿರಾವಿನಲ್ಲಿ ಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಖಾಸಗಿ ಜಮೀನಿನಲ್ಲಿ ಉಳುಮೆ ಮಾಡಿದ ವ್ಯಕ್ತಿ ವಿರುದ್ಧ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದೆ.

1mood1
ಹೊಸಬೆಟ್ಟು ಬಿರಾವಿನ ರಮೇಶ್ ಶೆಟ್ಟಿ ಎಂಬವರ ಕೃಷಿ ಭೂಮಿಗೆ ನೆರೆಮನೆಯ ಸುಧಾಕರ ಚೌಟ ಅವರು ಶನಿವಾರದಂದು ಅಕ್ರಮ ಪ್ರವೇಶ ಮಾಡಿ ಟಿಲ್ಲರ್ನಲ್ಲಿ ಉಳುಮೆ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಆಕ್ಷೇಪಿಸಿದ ಜಾಗದ ಮಾಲೀಕ ರಮೇಶ ಶೆಟ್ಟಿ, ಗೋಪಾಲ ಶೆಟ್ಟಿ ಸುನೀತಾ ಹಾಗೂ ಮನೆಯವರಿಗೆ ಸುಧಾಕರ ಚೌಟ ಕಡೆಯವರು ಬೆದರಿಕೆ ಹಾಕಿ ಸದ್ರಿ ಜಾಗಕ್ಕೆ ಕಾಲಿಡದಂತೆ ಎಚ್ಚರಿಸಿದ್ದಾರೆ ಎಂದು ಸುನೀತಾ ಎಂಬವರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *