ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರೇಮಾ ಹೂವಯ್ಯ ನಾಯಕ್ ಮತ್ತು ಉಪಾಧ್ಯಕ್ಷರಾಗಿ ಅದೇ ಪಕ್ಷ ಬೆಂಬಲಿತ ಸುಂದರ ಪೂಜಾರಿ ಅವರ ಆಯ್ಕೆಯಾಗಿದ್ದಾರೆ.
ಪಂಚಾಯತ್ನಲ್ಲಿ ಒಟ್ಟು 16 ಸದಸ್ಯರಿದ್ದು ಅತಂತ್ರ ಸ್ಥಿತಿಯಲ್ಲಿತ್ತು ಆದರೆ ಇದೀಗ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲದಿಂದ ಸ್ಪರ್ಧಿಸಿದ್ದ ಪ್ರೇಮಾ ಹೂವಯ್ಯ ನಾಯಕ್ ಅವರು 9 ಮತಗಳನ್ನು ಪಡೆದು ಜಯಗಳಿಸಿದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಜೆನೆಟಾ ಡಿಸೋಜಾ 7 ಮತಗಳನ್ನು ಪಡೆದು ಪರಾಭವಗೊಂಡರು.
ಉಪಾದ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಂದರ ಪೂಜಾರಿ ತನ್ನ ಪ್ರತಿಸ್ಪರ್ಧಿಸಿ ರಾಮಣ್ಣ ಗೌಡ ವಿರುದ್ಧ 9-7 ಮತಗಳ ಅಂತರದಲ್ಲಿ ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸತೀಶ್ ಕಲ್ಲಮುಂಡ್ಕೂರು ಕೊನೆ ಹಂತದಲ್ಲಿ ತನ್ನ ನಾಮಪತ್ರವನ್ನು ಹಿಂದಕ್ಕೆ ಪಡಕೊಂಡರು. ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್ ಕುಮಾರ್ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಹಾಜರಿದ್ದರು.

