ಮೀರ್ ಪುರ್: ಟಿ20 ವಿಶ್ವಕಪ್ ಫೈನಲ್ ಪ್ರವೇಶಕ್ಕಾಗಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಸೆಣಸಲಿವೆ. ಟೀಮ್​​ ಇಂಡಿಯಾ ಎರಡನೇ ಬಾರಿ ಟಿ20 ವಿಶ್ವಕಪ್​ ಎತ್ತಿ ಹಿಡಿಯಲು ಇನ್ನೆರಡೇ ಪಂದ್ಯ ಬಾಕಿಯಿದೆ. ಚೋಕರ್ಸ್ ಎಂಬ ಹಣೆಪಟ್ಟಿಯನ್ನ ತೊಡೆದುಹಾಕಲು ದಕ್ಷಿಣ ಆಫ್ರಿಕಾಗೆ ಮತ್ತೊಂದು ಸದವಕಾಶ ಸಿಕ್ಕಿದೆ. ಈವರೆಗೆ ಈ ಎರಡೂ ತಂಡಗಳು ಟಿ20 ಪಂದ್ಯಗಳಲ್ಲಿ ಒಟ್ಟಾರೆ 7 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 5 ಬಾರಿ ಗೆಲುವು ಸಾಧಿಸಿದರೆ, 2 ಬಾರಿ ಮಾತ್ರ ಸೋತಿದೆ. ಈ ಅಂಕಿ ಅಂಶಗಳು ಟೀಮ್​ ಇಂಡಿಯಾ ಪರವಾಗಿದೆ. ಅಲ್ಲದೇ, ಭಾರತೀಯ ಹುಲಿಗಳು ದ್ಕಷಿಣ ಆಫ್ರಿಕಾದಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಇನ್ನು, ಸೌತ್​​ ಆಫ್ರಿಕಾ ಮಹತ್ವದ ಟೂರ್ನಿಗಳ ಅಂತಿಮ ಹಂತಗಳಲ್ಲಿ ಎಡವಿಬೀಳುವ ಚಾಳಿ ಹೊಂದಿದೆ. ಸೆಮಿಫೈನಲ್​​ ಹಾಗೂ ಫೈನಲ್​​ ಪಂದ್ಯಗಳಲ್ಲಿ ಹರಿಣಗಳ ಪರವಾಗಿ ಯಾವುದೇ ಉತ್ತಮ ಅಂಕಿ ಆಂಶಗಳಿಲ್ಲ. ಇದು ಧೋನಿ ಬಳಗಕ್ಕೆ ಪ್ಲಸ್ ಆಗಿದೆ.

 

india

ಇತ್ತ, ಟಿ20 ವಿಶ್ವಕಪ್​​ ಲೀಗ್’​​ನ 4 ಪಂದ್ಯಗಳನ್ನು ಗೆದ್ದಿರುವ ಟೀಮ್​​ ಇಂಡಿಯಾ ಆತ್ಮವಿಶ್ವಾಸದಲ್ಲಿದೆ. ಆದರೆ, ಆರಂಭಿಕರು ಮಾತ್ರ ಪದೇ ಪದೇ ವಿಫಲವಾಗುತ್ತಿರುವುದು ಕೊಂಚ ತಲೆ ನೋವಾಗಿದೆ. ಧವನ್​​ ಕ್ಲಿಕ್​​ ಆದ್ರೆ, ರೋಹಿತ್​​ ಕೈ ಕೊಡ್ತಿದ್ದಾರೆ. ರೋಹಿತ್​​ ಕ್ಲಿಕ್​​ ಆದಾಗ ಧವನ್​​ ಫ್ಲಾಪ್​​ ಆಗ್ತಿದ್ದಾರೆ. ಹೀಗಾಗಿ ಆರಂಭದಲ್ಲಿ ಒಂದೊಳ್ಳೆ ಜತೆಯಾಟವನ್ನ ನೋಡೊಕೆ ಸಾಧ್ಯವಾಗ್ತಿಲ್ಲ. ಉಳಿದಂತೆ ಕೊಹ್ಲಿ, ರೈನಾ, ಧೋನಿ ಅತ್ಯುತ್ತಮ ಫಾರ್ಮ್’​​ನಲ್ಲಿದ್ದಾರೆ. ಇನ್ನು ಯುವಿ ಕೂಡ ಫಾರ್ಮ್’​​ಗೆ ಮರಳಿರೋದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಆದರೆ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಯುವಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಬೌಲಿಂಗ್’​ನಲ್ಲಿ ಅಮಿತ್​​ ಮ್ಯಾಜಿಕ್​​ ಮುಂದುರೆದಿದ್ದು, ಜಡೇಜಾ ಹಾಗೂ ಅಶ್ವಿನ್​​ ಎದುರಾಳಿಗಳಿಗೆ ಕಂಟಕವಾಗುತ್ತಿದ್ದಾರೆ. ವೇಗಿ ಮೊಹಮ್ಮದ್ ಶಮಿ ಜಾಗದಲ್ಲಿ ಮೋಹಿತ್ ಶರ್ಮಾ ಆಡುವ ನಿರೀಕ್ಷೆಯಿದೆ.
ಭಾರತ ತಂಡದ ಸ್ಪಿನ್​​ ದಾಳಿಯನ್ನು ಎದುರಿಸಲಿಕ್ಕೆ ದಕ್ಷಿಣ ಆಫ್ರಿಕಾ ಕೂಡ ಭಾರೀ ತಯಾರಿ ನಡೆಸುತ್ತಿದೆ. ಟಾಸ್​​ ಪ್ರಮುಖ ಪಾತ್ರ ವಹಿಸಲಿದ್ದು, ಹರಿಣಗಳು ಟಾಸ್​​ ಗೆದ್ರೆ, ಬ್ಯಾಟಿಂಗ್​​ ಆಯ್ಕೆ ಮಾಡಿಕೊಳ್ಳುವ ಐಡಿಯಾದಲ್ಲಿದ್ದಾರೆ. ಹರಿಣಗಳು ಈವರೆಗೆ ಗೆದ್ದಿರೋದು ಕರಾರುವಾಕ್ಕಾದ ಬೌಲಿಂಗ್​ ದಾಳಿಯಿಂದ. ಹೀಗಾಗಿ ​​ಮೊದಲು ಬ್ಯಾಟಿಂಗ್​​ ಮಾಡಿ ಒತ್ತಡ ಹೇರುವ ಪ್ಲಾನ್​​ ಅವರದ್ದು. ಇನ್ನು, ಬೌಲಿಂಗ್​​​​ ಟೆಕ್ನಿಕ್’​​ಗಳನ್ನ ಸ್ಪಿನ್​ ಮಾಂತ್ರಿಕ ವಾರ್ನ್​ ಅವರಿಂದ ಪಡೆದುಕೊಂಡಿದ್ದು, ಭಾರತೀಯರಿಗೆ ಟಾಂಗ್​​ ಕೊಡುವ ಯೋಜನೆ ರೂಪಿಸಿಕೊಂಡಿದ್ದಾರೆ.

ಭಾರತ ತಂಡ:
ಎಂಎಸ್ ಧೋನಿ, ಶಿಖರ್​ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್​ ರೈನಾ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಆರ್​. ಅಶ್ವಿನ್, ಅಮಿತ್ ಮಿಶ್ರಾ ಸ್ಟುವರ್ಟ್​ ಬಿನ್ನಿ, ಮೊಹಮ್ಮದ್ ಶಮಿ, ಭುವನೇಶ್ವರ್​ ಕುಮಾರ್​, ಮೋಹಿತ್ ಶರ್ಮಾ, ವರುಣ್ ಆರೋನ್.

ದಕ್ಷಿಣಾ ಆಫ್ರಿಕಾ ತಂಡ:
ಹಶೀಮ್​ ಆಮ್ಲಾ, ಕ್ಯೂಂಟನ್​​ ಡಿ ಕಾಕ್​​, ಎಬಿ ಡಿವಿಲಿಯರ್ಸ್​​, ಜೆಪಿ ಡುಮಿನಿ, ಫಾ ಡುಪ್ಲೆಸಿಸ್​​, ಡೇವಿಡ್​​ ಮಿಲ್ಲರ್​​, ಅಲ್ಬಿ ಮಾರ್ಕೆಲ್​​, ಮೊರ್ನೆ ಮಾರ್ಕೆಲ್​​, ಫರಾನ್​ ಬೆಹಾರ್ಡಿನ್​, ಡೇಲ್​ ಸ್ಟೈನ್​​, ಬ್ಯೂರಾನ್​​ ಹ್ಯಾಂಡ್ರಿಕ್ಸ್​​, ಇಮ್ರಾನ್​​ ತಹೀರ್​​​, ವೈನ್​​ ಪಾರ್ನೆಲ್​​, ಆರೋನ್​​ ಫಂಗಿಸೋ, ಲೋನ್ವಬೊ ತ್ಸೊತ್ಸೊಬೆ.

ಈ ಎರಡನೇ ಸೆಮಿಫೈನಲ್ ಪಂದ್ಯ ಢಾಕಾದಲ್ಲಿ ಇಂದು ಸಂಜೆ 6:30ಕ್ಕೆ ಆರಂಭವಾಗಲಿದೆ.

By suddi9

Leave a Reply

Your email address will not be published. Required fields are marked *