ಬೆಂಗಳೂರು:ಬಿಲ್ಲವ ಅಸೋಸಿಯನ್ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ಕೋಟಿ ಚೆನ್ನಯ ಕ್ರೀಡಾಕೂಟವು ಜೂ.28ರಂದು ಭಾನುವಾರ ಜರಗಿತು.
ಬೆಂಗಳೂರು ಗಾಂದಿ ನಗರದ ಸೆಂಟ್ರಾಲ್ ಕಾಲೇಜು ಕ್ರೀಡಾಂಗಣದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಗಮದ ಅಧ್ಯಕ್ಷರಾದ ಶ್ರೀ ರಾಮಚಂದ್ರಪ್ಪರವರು ದ್ವಜರೋಹನ ನೆರವೇರಿಸಿ ದೀಪಬೆಳಗಿಸಿ ಕ್ರೀಡಾ ಕೂಟವನ್ನು ಉದ್ಘಾಟಿಸಿದರು.
ಕ್ರೀಡೆಯಲ್ಲಿ ಹಲವಾರು ಕ್ರೀಡಾಪಟುಗಳು ಸಾದನೆ ಮಾಡಿ ಉಟ್ಟೂರಿಗೆ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದಿರುತ್ತಾರೆ ಕ್ರೀಡೆ ದೇಶದ ಆಸ್ತಿ . ಅಲ್ಲದೇ ವಿವಿಧ ವ್ಯಾಸಂಗಕ್ಕೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ನಗರ ಠಾಣೆಯ ಆರಕ್ಷಕ ರಾಜೇಶ್ ಕೋಟ್ಯಾನ್ ವಹಿಸಿದ್ದರು. ಸಂಘವು ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹಾಗೂ ಆರ್ಥಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುವುದು ಹೆಮ್ಮೆಯ ವಿಷಯ ಎಂದರು. ಇತ್ತಿಚೇಗೆ ಪೋಲಿಸ್ ಇಲಾಖೆಗೆ ಪರೀಕ್ಷೆ ಬರೆಯಲು ಬರುವ ಜನರು ಕಡಿಮೆಯಾಗುವುದು ಬೇಸರವಾಗಿದೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸ್ ಕೆಲಸಕ್ಕೆ ಸೇರಲು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕ್ರತರಾದ ಕುಮಾರಿ ಅಕ್ಷತಾ ಪೂಜಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಹಿರಿಯ ಅಧ್ಯಕ್ಷ ಬಾಸ್ಕರ ಸಿ ಅಮೀನ್, ಉಪಾಧ್ಯಕ್ಷೆ ಶಾರದಾ ಕ್ರಷ್ಣ ಪ್ರಧಾನಕಾರ್ಯದರ್ಶಿ ಭಾಸ್ಕರ ಪೂಜಾರಿ, ಜತೆ ಕಾರ್ಯದರ್ಶಿ ರಾಜೇಶ್ ಕುಮಾರ್,ಕೋಶಾಧಿಕಾರಿ ಕೆ.ಡಿ . ಪೂಜಾರಿ , ಸಂಘಟನಾ ಕಾರ್ಯದರ್ಶಿ ಬಿ .ಎಂ ಉದಯ ಕುಮಾರ್ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಯುವಕರು , ಯುವತಿಯರು ವಯೋವೃದರವರೆಗೆ ಸುಮಾರು 500 ಕ್ರೀಡಾಪಟುಗಳು ಭಾಗವಹಿಸಿದರು. ಸಂಜೆ ನಡೆದ ಸಮರೋಪ ಸಮಾರಂಭದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಾರತ್ ಕೋಅಫರೇಟ್ ಬ್ಯಾಂಕ್ ಮುಂಬಯಿ ಇದರ ಡಿ ಜಿ ಎಮ್ ಕಿಶೋರ್ .ಡಿ ಕೋಟ್ಯಾನ್ ಕ್ರೀಡಾಪಟುಗಳನ್ನು ಅಭಿನಂದಿಸಿ ಬಹುಮಾನ ವಿತರಿಸಿದರು. ಕೆಫೆ ಕಾಫಿ ಡೇ ಕಂಪೆನಿ ಕಾರ್ಯದರ್ಶಿ ಸದಾನಂದ ಪೂಜಾರಿ ಬಾಗವಹಿಸಿ ಬಹುಮಾನ ಮತ್ತು ಟ್ರೋಫಿಗಳನ್ನು ನೀಡಿದರು. ಸಂಘದ ಅಧ್ಯಕ್ಷ ಎಂ. ವೇದ ಕುಮಾರ್ ಸ್ವಾಗತಿಸಿ, ಬಾಲಕೃಷ್ಣ ವಂದಿಸಿದರು. ಕೃಷ್ಣಪ್ಪ ಎಚ್ ಎ ಎಲ್ ನಿರೂಪಿಸಿದರು.


