ಸುರತ್ಕಲ್: ಹೆಂಡತಿ ಜೊತೆ ತನ್ನ ಮನೆಯತ್ತ ಸಾಗುತ್ತಿದ್ದ ಎನ್ಐಟಿಕೆ ವಿದ್ಯಾಸಂಸ್ಥೆಯ ಜಿಮ್ ತರಬೇತು ದಾರ ಅಶೋಕ್ ಭಟ್ ಎಂಬವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಭಾನುವಾರ ತಡರಾತ್ರಿ ಮುಂಚೂರು ಬಳಿ ಸಂಭವಿಸಿದ್ದು ಅವರು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡರೆಂಬ ಕಾರಣಕಕೆ ಇರಿದರೇ ಎಂಬ ಪ್ರಶ್ನೆ ಪೊಲೀಸರಲ್ಲಿ ಹುಟ್ಟಿಕೊಂಡಿದೆ.
ashok bhat 2

ashok bhatಸುರತ್ಕಲ್ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಮ್ ತರಬೇತುದಾರರಾಗಿರುವ ಅಶೋಕ್ ಭಟ್ ಅವರು ಪತ್ನಿ ಜೊತೆ ಚೇಳಾರು ಮದ್ಯದಿಂದ ತನ್ನ ಎನ್ಐಟಿಕೆ ಕ್ವಾಟ್ರಸ್ಗೆ ಬರುತ್ತಿದ್ದ ವೇಳೆ ಹೊಸ ಎಫ್ಝೀ ಬೈಕಿನಲ್ಲಿ ಹಿಂಬಾಲಿಸಿ ಕೊಂಡು ಬಂದ ಇಬ್ಬರು ದುಷ್ಕರ್ಮಿ ಗಳು ಮುಂಚೂರು ಬಳಿ ಅಶೋಕ್ ಅವರ ಬೈಕಿಗೆ ಅಡ್ಡ ಹಾಕಿ ಏಕಾಏಕಿ ಚೂರಿಯಿಂದ ಇರಿದು ಪರಾರಿಯಾ ಗಿದ್ದಾರೆ. ಗಾಯಗೊಂಡು ಕುಸಿದು ಬಿದ್ದಿದ್ದ ಅಶೋಕ್ ಅವರನ್ನು ಪತ್ನಿ ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪತ್ನಿ ಇರುವಾಗಲೇ ಕೊಲೆಗೆ ಯತ್ನಿಸಲಾಗಿದೆಯಾದರೂ ಆರೋಪಿಗಳ ಗುರುತು ಪತ್ತೆಯಾಗಿಲ್ಲ.ಅಶೋಕ್ ಭಟ್ ಅವರನ್ನು ಕೊಲ್ಲುವ ಉದ್ದೇಶದಿಂದ ಬಂದ ದುಷ್ಕರ್ಮಿಗಳು ಭಟ್ ಅವರ ಎಡಭಾಗದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾರೆಂದು ಹೇಳಲಾಗಿದೆ. ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ಲಭ್ಯವಾಗಿದ್ದು, ಆದರೆ ಅವರೆಲ್ಲಾ ಪರಾರಿಯಾಗಿದ್ದಾರೆ ಎನ್ನಲಾಗಿದೆ.

By Suddi9

Leave a Reply

Your email address will not be published. Required fields are marked *