ಬಂಟ್ವಾಳ: ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪುದು ಹಾಗೂ ಸಜಿಪ ನಡುವಿನಲ್ಲಿ ನಡೆದಿದ್ದ ಇಬ್ಬರು ಯುವತಿಯರು ಕಾಣೆಯಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳು ಹೊಸ ತಿರುವು ಪಡೆದುಕೊಂಡಿದೆ. ಪುದು ಗ್ರಾಮ ಮಾರಿಪಳ್ಳದಿಂದ ಯುವತಿ ನಾಪತ್ತೆಯಾಗಿದ್ದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಜೂ.21 ರಂದು ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಕೋಮಿನಡ್ಕ ನಿವಾಸಿ ವಿವಾಹಿತ ಯುವಕ ಇರ್ಸಾದ್ (24) ಕೂಡ ನಾಪತ್ತೆಯಾಗಿದ್ದು, ಇವರಿಬ್ಬರೂ ಜೊತೆಯಾಗಿಯೇ ತೆರಳಿದ್ದಾರೆ ಎಂಬ ವದಂತಿ ಹಬ್ಬಿತ್ತು. ಮನೆಮಂದಿ ಹುಡುಕಿದಾಗ ಈರ್ವರು ಧಾರವಾಡದಲ್ಲಿ ಪತ್ತೆಯಾಗಿದ್ದು, ಅವರವರ ಮನೆಗೆ ಕರೆತಂದಿದ್ದಾರೆ. ಈ ಪ್ರಕರರಣಕ್ಕೆ ಕುರಿತಂತೆ ಯುವತಿ ತನ್ನನ್ನು ಅಪಹರಿಸಿ ತನ್ನ ಮೇಲೆ ಅತ್ಯಾಚಾರ ವೆಸಗಿದ್ದಾನೆ ಎಂದು ಇರ್ಷಾದ್ ವಿರುದ್ದ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಇರ್ಷಾದ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾದೆ.

ಸಜಿಪನಡು ಗ್ರಾಮದಿಂದ ಜೂನ್ 11 ರಂದು ನಾಪತ್ತೆಯಾಗಿದ್ದ ಯುವತಿ ಇಂತಿಯಾಝ್ ಜೊತೆ ಕಳೆದ ಜೂ.17 ರಂದು ಗ್ರಾಮಾಂತರ ಠಾಣೆಗೆ ಹಾಜರಾಗಿದ್ದಳು. ಇದೇ ಸಂದರ್ಭ ಪೊಲೀಸರಿಗೆ ಹೇಳಿಕೆ ನೀಡಿದ್ದ ಯುವತಿ, ಸ್ವಂತ ಇಚ್ಛೆಯಿಂದ ಇಂತಿಯಾಝ್ ಜೊತೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಳು. ಮನೆಯವರೊಂದಿಗೆ ಹೋಗಲು ಒಪ್ಪದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಆಕೆಯನ್ನು ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು. ಶನಿವಾರ ಠಾಣೆಗೆ ತನ್ನ ಹೆತ್ತವರೊಂದಿಗೆ ಬಂದ ಯುವತಿ ತನ್ನನ್ನು ಇಂತಿಯಾಝ್ ಅಪಹರಿಸಿ ಕರೆದೊಯ್ದಿದ್ದಾನೆ ಎಂದು ಆತನ ವಿರುದ್ದ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಮತ್ತು ಸಿಬ್ಬಂದಿ ಗಳು ತನಿಖೆ ನಡೆಸುತ್ತಿದ್ದಾರೆ

By Suddi9

Leave a Reply

Your email address will not be published. Required fields are marked *