ಬಂಟ್ವಾಳ : ಬಂಟ್ವಾಳ ಜೈನ್ ಮಿಲನ್ ಮಾಸಿಕ ಸಭೆಯು ಸರಪಾಡಿ ಮಾವಿನಕಟ್ಟೆಯಲ್ಲಿ ಜರಗಿತು. ಜೈನ್ ಮಿಲನ್ ಅಧ್ಯಕ್ಷ ಆದಿರಾಜ್ ಕೊಯಕ್ಕುಡೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಲೂರು ಮಾಗಣೆಗುತ್ತು ರತ್ನಾಕರ ಕೊಂಡೆ ಅವರು ಮುಖ್ಯಅತಿಥಿಯಾಗಿ ಮಾತನಾಡಿ ದ.ಕ.ಜಿಲ್ಲೆಯಲ್ಲಿ ದೈವಾರಾಧನೆ ವಿಷಯದಲ್ಲಿ ಉಪನ್ಯಾಸ ನೀಡಿದರು. ಪ್ರಮುಖರಾದ ಶಿಕ್ಷಕ ಉದಯ ಕುಮಾರ್, ಅನಂತ್ರಾಜ ಇಂದ್ರ , ಸುಭಾಶ್ಚಂದ್ರ ಜೈನ್ ಉಪಸ್ಥಿತರಿದ್ದರು.
2706pkt3
ಕಾರ್ಯಕ್ರಮದಲ್ಲಿ ಕೇರಂ, ಚೆನ್ನಮಣೆ ಮುಂತಾದ ಒಳಾಂಗಣ ಆಟಗಳಲ್ಲಿ ಸದಸ್ಯರು ಭಾಗವಹಿಸಿದರು. ಮುಖ್ಯ ಅತಿಥಿಗಳಿಗೆ ಹಾಗೂ ಕ್ರೀಡಾ ವಿಜೇತರಿಗೆ ಮಿಲನ್ ಅಧ್ಯಕ್ಷ ಆದಿರಾಜ್ ಜೈನ್ ಅವರು ಸ್ವತಃ ಬೆಳೆಸಿದ ಇಂಟರ್-ಸಿ-ಮಂಗಳ ಗಿಡಗಳನ್ನು ವಿತರಿಸಿದರು.
ಮನ್ಮಥರಾಜ್ ಕಾಜವ ಅವರು ಸ್ವಾಗತಿಸಿದರು. ಚಂದ್ರಕಾಂತ್ ಜೈನ್ ವಂದಿಸಿದರು. ಪಾಶ್ರ್ವನಾಥ ಹೇರೆತ್ಯಾರ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *