ಬಂಟ್ವಾಳ : ತಾಲೂಕು ದೇವಶ್ಯಪಡೂರು ದ.ಕ.ಜಿ.ಪಂ.ಕಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಶಾಲೆಯಲ್ಲಿ ಜರಗಿತು.
ನಿವೃತ್ತ ಶಿಕ್ಷಕಿ ಲೀಲಾವತಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಮಾಂಗಜೆಗುತ್ತು ಮಾಣಿಕ್ಯರಾಜ್ ಜೈನ್ ಅವರು ಅವಿರೋಧವಾಗಿ ಆಯ್ಕೆಯಾದರು.
ಅನಿತಾ ಕೇದಿಗೆ ಉಪಾಧ್ಯಕ್ಷರಾಗಿ, ಚಂದ್ರಶೇಖರ ಕೇದಿಗೆ ಕಾರ್ಯದರ್ಶಿಯಾಗಿ, ಪದ್ಮನಾಭ ಎಂ. ಮರಾದೊಟ್ಟು ಕೋಶಾಕಾರಿಯಾಗಿ, ಕೆ.ಭವಾನಿಶಂಕರ್ ರಾವ್, ಪ್ರವೀಣ್ ಕುಮಾರ್,ಆದಿರಾಜ್ ಜೈನ್ ಗೌರವ ಸಲಹೆಗಾರರಾಗಿ ಆಯ್ಕೆಯಾದರು.
ಮುಖ್ಯಶಿಕ್ಷಕ ಅವಿನಾಶ್, ಶಾಲಾ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

