ಬಂಟ್ವಾಳ: ಒಂದಲ್ಲ ಒಂದು ದಿನ ಈ ನೆಲದ ಹೆಣ್ಣುಗಳು ಮೆರವಣಿಗೆ ಹೊರಡುತ್ತಾರೆ…….ಈ ಸಾಲಿನಿಂದ ಆರಂಭವಾಗುವ ಹೆಣ್ಣುಗಳ ಗಟ್ಟಿ ಮನಸ್ಸಿನ ದಿಟ್ಟ ಹೆಜ್ಜೆಯ ಪಯಣದ ಹಾಡನ್ನು ಕೇಳಿದಾಗ ಅಲ್ಲಿದ್ದವರು ಒಮ್ಮೆಗೆ ಬೆರಗಾದರು. ಹೆಣ್ಮಕ್ಕಳು ಈ ಮಟ್ಟಕ್ಕೆ ಬೆಳೆದಿದ್ದಾರೆಯೇ? ಮುಂದೆ ಬೆಳೆಯಬಹುದೇ? ಹಾಗೆ ಬೆಳೆಯಲು ಈ ಸಮಾಜ ಅವಕಾಶ ನೀಡಬಹುದೇ? ಇತ್ಯಾದಿ ಪ್ರಶ್ನೆಗಳು ನೆರೆದಿದ್ದವರ ಮನದಲ್ಲಿ ಮೂಡಿತು. ಹೌದು… ಹೆಣ್ಣು ಮಗಳು ಒಂದಲ್ಲ ಒಂದು ದಿನ ಮನೆಯ, ಕುಟುಂಬದ, ಸಮಾಜದ ಎಲ್ಲಾ ಬಂಧನಗಳಿಂದ ಮುಕ್ತಳಾಗಿ ಸ್ವತಂತ್ರಳಾಗಿ ಬದುಕುತ್ತಾಳೆ, ಬದುಕಲೇ ಬೇಕು ಎಂದು ಮನಸ್ಸುಗಳು ಹಾರೈಸಿತು.ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಾಗುತ್ತಿರುವ ಹಿಂಸೆ, ಶೋಷಣೆ, ದೌರ್ಜನ್ಯಗಳ ಬಗೆಗಿನ ಪ್ರಶ್ನೆ, ಚಿಂತನೆ, ಭಾವನೆಗಳಿಗೆ ವೇದಿಕೆಯಾಗಿದ್ದು ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣ. ಬ್ರೇಕ್ಥ್ರೂ ಸಂಸ್ಥೆಯು ಬಂಟ್ವಾಳ ಅರಿವು ಯುವ ಸಂವಾದ ಕೇಂದ್ರದ ಜತೆಗೂಡಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಬುಧವಾರ ಈ ಕಾಲೇಜಿನಲ್ಲಿ ನಡೆಸಿದ ” ಹಿಂಸೆ ಮುಕ್ತ ಗ್ರಾಮ ನಿರ್ಮಾಣದತ್ತ ನಮ್ಮ ಹೆಜ್ಜೆ” ಮಾಧ್ಯಮ ಸ್ನೇಹಿಗಳೊಂದಿಗೆ ಸಂವಾದ ಕಾರ್ಯಕ್ರಮವು ಹೆಣ್ಮಕ್ಕಳ ಬದುಕು ಬವಣೆಯ ಬಗ್ಗೆ ಮಾಧ್ಯಮ ಸ್ನೇಹಿಗಳು ಹಾಗೂ ವಿದ್ಯಾರ್ಥಿ ಗಳು ಒಂದಷ್ಟು ಯೋಚಿಸಲು, ಚರ್ಚಿ ಸಲು ಅವಕಾಶ ಮಾಡಿಕೊಟ್ಟಿತು.

P.B.Harish Talk

Raja Bantwala Sharing

Rajalaxmi kodibettu Sharing

Suneela jarandagudde talk

Udgataka Bantwala E.O. Girish talk

Inauguration with Thamate drumming
ಒಂದಲ್ಲ ಒಂದು ದಿನ ಈ ನೆಲದ ಹೆಣ್ಣುಗಳು ಮೆರವಣಿಗೆ ಹೊರಡುತ್ತಾರೆ…….ಎಂಬ ಜಾಗೃತಿ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದುದ್ದಕ್ಕೂ ಹೆಣ್ಣು ಮಕ್ಕಳ ಮೇಲೆ ನಾನಾ ರೀತಿಯಲ್ಲಿ ಆಗುತ್ತಿರುವ ಹಿಂಸೆಗಳು, ಅದಕ್ಕೆ ಕಾರಣಗಳು, ಪರಿಹಾರಗಳು, ಹಿಂಸೆ ಮುಕ್ತ ಗ್ರಾಮ ನಿರ್ಮದಲ್ಲಿ ಸಮುದಾಯ, ಸಂಘಟನೆಗಳು ಹಾಗೂ ಮಾಧ್ಯಮದವರ ಪಾತ್ರದ ಬಗ್ಗೆ ಗಂಭೀರವಾದ ಚರ್ಚೆ  ನಡೆಯಿತು.
ತಮಟೆಯ ಶಬ್ಧನೊಂದಿಗೆ ಚಾಲನೆ:
ಬಂಟ್ವಾಳ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ, ಕಾಲೇಜಿನ ಪ್ರಾಂಶುಪಾಲ ಡಾ.ಅಜೆಕ್ಕಳ ಗಿರೀಶ ಭಟ್ ಅವರ ಅಧ್ಯಕ್ಷತೆಯ ಅನುಭವದ ಮಾತುಗಳು, ಮಾನವ ಹಕ್ಕು ಹೋರಾಟಗಾರ್ತಿ  ವಿದ್ಯಾ ದಿನಕರ್ ಅವರ ಮಹಿಳಾ ಪರವಾಗಿನ ಸ್ಪೂರ್ತಿ ಯತ ವಿಚಾರಧಾರೆಗಳು, ಬ್ರೇಕ್ ಥ್ರೂ ಸಂಸ್ಥೆಯ ರಾಜ್ಯ ಕಾರ್ಯಕ್ರಮ ಪ್ರಬಂಧಕಿ ಕನ್ಮಣಿ, ಸಂಸ್ಥೆಯ ಒಡನಾಡಿ ಸುನೀಲ ಜಾರಂದಗುಡ್ಡೆ ಅವರ ಸ್ವಅನುಭವದ ಅನಿಸಿಕೆಗಳು ಚಿಂತನೆಯನ್ನು ಎತ್ತರಿಸುವಂತೆ ಮಾಡಿತು.
ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ರಾಜಲಕ್ಷ್ಮೀ ಕೋಡಿಬೆಟ್ಟು, ಮುರಲಿ, ಮೌನೇಶ್ ವಿಶ್ವಕರ್ಮ, ರಾಜಾ ಬಂಟ್ವಾಳ, ಗೋಪಾಲ ಅಂಚನ್, ಸಂದೀಪ್ ಸಾಲ್ಯಾನ್, ವಿಷ್ಣುಗುಪ್ತ ಪುಣಚ, ಮಹಮ್ಮದ್ ಆಲಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು. ಬ್ರೇಕ್ ಥ್ರೂ ಸಂಸ್ಥೆಯ ತರಬೇತುದಾರೆ ಮಾರ್ಗರೇಟ್, ಕಾರ್ಯಕ್ರಮ ಸಂಯೋಜಕ ಬಿ.ಎಸ್.ಕರ್ಕೇರ, ತೇಜಸ್ವಿನಿ, ಅರಿವು ನಿರ್ದೇಶಕ ನಾದ ಮಣಿನಾಲ್ಕೂರು ಕಾರ್ಯಕ್ರಮ ಸಂಯೋಜಿಸಿದರು.
ಹಿಂಸೆ ಮುಕ್ತ ಗ್ರಾಮ:
ಮಾನವ ಹಕ್ಕುಗಳು, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಹಿಂಸಾಮುಕ್ತ ಸಮಾಜದ ನಿರ್ಮಾಣ, ಜನಾಂಗೀಯ ನ್ಯಾಯ ಮೊದಲಾದ ವಿಷಯಗಳಲ್ಲಿ ಸೃಜನಶೀಲವಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಬ್ರೇಕ್ ಥ್ರೂ ಸಂಸ್ಥೆ ಕೆಲಸ ಮಾಡುತ್ತಿದೆ. ದೇಶದಲ್ಲಿ 6 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು ಈ ಪೈಕಿ ಕನರ್ಾಟಕವೂ ಒಂದು. ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಬಂಟ್ವಾಳದ ಮೇರಮಜಲು, ಅಮ್ಟಾಡಿ, ಕಡೇಶಿವಾಲಯ, ಪಜೀರು, ವಿಟ್ಲಪಡ್ನೂರು, ಮಂಗಳೂರಿನ ಕೋಟೆಕಾರು, ಮೂಡುಶೆಡ್ಡೆ, ಕುಪ್ಪೆಪದವು, ಪೆರ್ಮುದೆ, ಬಳ್ಕುಂಜೆ ಗ್ರಾಮಗಳನ್ನು ಹಿಂಸೆ ಮುಕ್ತ ಗ್ರಾಮಗಳನ್ನಾಗಿಸುವ ದೃಷ್ಠಿಯಿಂದ ಕೆಲಸ ಮಾಡುತ್ತಿದ್ದು ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಹೆಣ್ಣು ಮಕ್ಕಳನ್ನು ಹಣದ ಕೊರತೆ ಎಂಬ ನೆಪವೊಡ್ಡಿ ಕಲಿಕೆಯಿಂದ ವಂಚಿಸುತ್ತಾರೆ. ನಾವೇ ದುಡಿದು ಸಂಪಾದಿಸುತ್ತಾ ಕಲಿಕೆಯನ್ನು ಮುಂದುವರಿಸಬೇಕು. ನಮಗೆ ಕಾನೂನಿನ ಅರಿವಿದ್ದಾಗ, ನಾನಾ ವಿಷಯಗಳಲ್ಲಿ ತರಬೇತಿ ಹೊಂದಿದ್ದಾಗ ಶೋಷಣೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ನಾವು ಮೌನ ಮುರಿದು ಮಾತಾಡಿದಾಗ ಶೋಷಿಸುವವರು ಮೌನವಾಗುತ್ತಾರೆ-ಸುನೀಲಾ ಜಾರಂದಗುಡ್ಡೆ
ಹಿಂಸೆ ನಾನಾ ರೂಪದಲ್ಲಿ ಪ್ರತಿ ಮನೆಯಲ್ಲಿಯೂ ನಡೆಯುತ್ತದೆ. ಅದು ಹೊರಜಗತ್ತಿಗೆ ಗೊತ್ತಾಗದೇ ಗುಪ್ತವಾಗಿರುತ್ತದೆ. ದಿನದ 17 ಗಂಟೆ ಮನೆಯಲ್ಲಿ ದುಡಿಯುವ ತಾಯಿಗೆ ಇವತ್ತಿಗೂ ಸಂಬಳವಿಲ್ಲ, ಭಾನುವಾರದ ರಜೆಯೂ ಇಲ್ಲ, ಹಬ್ಬಗಳ ಸಂಭ್ರಮವೂ ಇಲ್ಲ. ನಮ್ಮ ತಾಯಿಯಂತೆ ಇತರ ಹೆಣ್ಮಕ್ಕಳು ಸಮಾಜದಲ್ಲಿ ಶೋಷಣೆಗೊಳಗಾಗುತ್ತಿದ್ದಾರೆ. ನಾವು ಧ್ವನಿ ಎತ್ತಬೇಕು-ವಿದ್ಯಾ ದಿನಕರ್
.ಸ್ತ್ರೀಯರ ಮೇಲೆ ಹಿಂಸೆ ನಡೆಯುವ ಮನೆಯಲ್ಲಾಗಲಿ, ಕುಟುಂಬದಲ್ಲಾಗಲಿ ಹಾಗೂ ಸಮಾಜದಲ್ಲಾಗಲಿ ಪುರುಷರು ನೆಮ್ಮದಿಯಿಂದ ಇರುವುದಿಲ್ಲ. ಯಾವುದೇ ಹಿಂಸೆಯ ಹಿಂದೆ ಸ್ವಹಿತವೇ ಕೆಲಸವೇ ಮಾಡುತ್ತದೆ. ಎಲ್ಲರ ಹಿತ ಮುಖ್ಯವಾದಾಗ ಹಿಂಸೆ ರಹಿತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ-ಗಿರೀಶ ಭಟ್
ಗೋಪಾಲ ಅಂಚನ್

By Suddi9

Leave a Reply

Your email address will not be published. Required fields are marked *