ಬಂಟ್ವಾಳ : ಬಂಟ್ವಾಳ – ಮೂಡಬಿದಿರೆ ಹೆದ್ದಾರಿಯ ಕೊಯಿಲದ ವಿವಿಧ ಭಾಗಗಳಲ್ಲಿ ಸಮರ್ಪಕ ರಸ್ತೆ ಚರಂಡಿ ಇಲ್ಲದೆ ರಸ್ತೆಯಲ್ಲಿಯೇ ನೀರು ಹರಿದುಹೋಗುತ್ತಿದ್ದು ಅಪಾಯಕಾರಿಯಾಗಿದೆ.  ಕೊಯಿಲ ಕ್ವಾಟ್ರಸ್ ಪಾಂಡವರಗುಡ್ಡೆಯನ್ನು ಸಂಪರ್ಕಿಸುವ ರಸ್ತೆಯಿಂದ ನೀರು ಹರಿದು ಮುಖ್ಯರಸ್ತೆಗೆ ಸೇರುತ್ತದೆ. ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಎದುರು ಭಾಗದಲ್ಲಿ ರಸ್ತೆಯಲ್ಲಿ ನೀರು ತುಂಬುತ್ತದೆ.

2406pkt5

ಇದರಿಂದ ಪಾದಾಚಾರಿಗಳಿಗೆ, ದ್ವಿಚಕ್ರ ವಾಹನಗಳಿಗೆ ಸಂಚರಿಸಲು ತೊಡಕಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯ ಗ್ರಾ.ಪಂ.ಸದಸ್ಯ ಜಗದೀಶ ಕೊಯಿಲ ಅವರು ಆರೋಪಿಸಿದ್ದು ತತ್ಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *