ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಇರ್ವತ್ತೂರು ಗ್ರಾಮ ಸಮಿತಿ ಪರವಾಗಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಇರ್ವತ್ತೂರುಪದವಿನಲ್ಲಿ ಪಕ್ಷದ ಹಿರಿಯ ಕಾರ್ಯಕರ್ತ ನಾಭಿರಾಜ್ ಜೈನ್ ಅವರು ಚಾಲನೆ ನೀಡಿದರು. ಬಂಟ್ವಾಳ ಬಿಜೆಪಿ ಪ್ರ.ಕಾರ್ಯದಶರ್ಶಿ ಆನಂದ ಕುಲಾಲ್ ಎಡ್ತೂರು, ಇರ್ವತ್ತೂರು ಗ್ರಾಮ ಸಮಿತಿ ಅಧ್ಯಕ್ಷ ಎಂ.ಶೇಖರ್, ಇರ್ವತ್ತೂರು ಗ್ರಾ.ಪಂ. ಸದಸ್ಯರಾದ ದಯಾನಂದ ಕುಲಾಲ್, ಮಾಲತಿ ಉಪಸ್ಥಿತರಿದ್ದರು.

