‘ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷೆ ಶಿಕ್ಷಣ ಅಗತ್ಯ’
ಬಂಟ್ವಾಳ: ಸಮಾಜದಲ್ಲಿ ಬಣ್ಣ ಬಣ್ಣದ ಸಮಸವ್ತ್ರ ಜೊತೆಗೆ ಕೊರಳಿಗೆ ಟೈ ಮತ್ತು ಕಾಲಿಗೆ ಶೂ ಹಾಕಿಕೊಮಡು ಹಳದಿ ಬಣ್ಣದ ವಾಹನದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುವ ಶೋಕಿಗೆ ಬದಲಾಗಿ ಪ್ರತೀ ಸರ್ಕಾರಿ ಶಾಲೆಯಲ್ಲಿ ಕೂಡಾ ಕನ್ನಡದ ಜೊತೆಗೆ ಆಂಗ್ಲ ಭಾಷೆ ಶಿಕ್ಷಣ ನೀಡಬೇಕು. ಆ ಮೂಲಕ ವಿದ್ಯಾರ್ಥಿ ಕೊರತೆ ನೆಪದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಮಕ್ಕಳ ಹೆತ್ತವರು ಮತ್ತು ದಾನಿಗಳು ಸರ್ಕಾರಿ ಶಿಕ್ಷಕರೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಎಸ್.ಗಟ್ಟಿ ಹೇಳಿದ್ದಾರೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೋಗೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಣೆಮಂಗಳೂರು ಸತ್ಯಶ್ರೀ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಮಂಗಳವಾರ ಉಚಿತ ಪುಸ್ತಕ ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಖಾಸಗಿ ಶಾಲೆಯನ್ನು ಮೀರಿಸುವ ಪ್ರತಿಭೆಗಳಿದ್ದು, ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಹೆಚ್ಚಿನ ತರಬೇತಿ ಸಿಗಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಮದ್ ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಪುರಸಭೆ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಶುಭ ಹಾರೈಸಿದರು. ಶಿಕ್ಷಕಿ ಲೀಲಾಕ್ಷ್ಮಿ ಮತ್ತಿತರರು ಇದ್ದರು.
24btl-Bogody
ಶಿಕ್ಷಕ ವೆಂಕಟರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಶಾಲೆಯಲ್ಲಿ ಈಗಾಗಲೇ ವಿದ್ಯಾಥರ್ಿಗಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದ್ದು, ಇವರನ್ನು ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ಬೆಳೆಸಲು ಶಾಲಾಭಿವೃದ್ಧಿ ಸಮಿತಿ ಮತ್ತು ಊರವರ ಸಹಕಾರ ಅಗತ್ಯವಿದೆ ಎಂದರು.
ಮುಖ್ಯಶಿಕ್ಷಕ ದಾಮೋದರ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *