ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇಂದಿಲ್ಲಿರವಿವಾರ ಮುಂಜಾನೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ನಡೆಸಲಾಗಿದ್ದು, ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ದೀಪ ಪ್ರಜ್ವಲಿಸಿ ಜಾಗತಿಕ ಯೋಗ ಸಂಭ್ರಮಕ್ಕೆ ಚಾಲನೆಯನ್ನೀಡಿದರು.
ಈ ಸಂದರ್ಭದಲ್ಲಿಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಸಿ.ಟಿ ಸಾಲ್ಯಾನ್, ಚಂದ್ರಶೇಖರ್ ಎಸ್.ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ಜೊತೆ ಕಾರ್ಯದರ್ಶಿ ಶಂಕರ್ ಡಿ.ಪೂಜಾರಿ, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ್ ಜೆ.ಪೂಜಾರಿ, ಮತ್ತಿತರ ಪದಾಧಿಕಾರಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದು, ಪತಾಂಜಲಿ ಯೋಗ ಕುಟೀರದಇದರ ಡಿ.ರಮೇಶ್ ಮತ್ತು ಎಸ್.ಕೆ ಶಾಸ್ತ್ರಿ ಅವರು ವಿವಿಧ ಭಂಗಿಗಳಲ್ಲಿ ಯೋಗವನ್ನು ಅಭ್ಯಾಸಿಸಿ ಯೋಗ ನಡೆಸಿದರು.





