ಮುಂಬಯಿ : ಮಂಗಳೂರು ಕರಾವಳಿಯಲ್ಲಿ ಉದ್ದಗಲಕ್ಕೆ ಕಳೆದ ಐದು ತಿಂಗಳ ಹಿಂದೆ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಮಾನಸಿಕ ಅಸ್ವಸ್ಥನಾಗಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳಿಯ ಸಮಾಜ ಸೇವಕ ರಾಝೀಕ್ ಉಳ್ಳಾಲ ಅವರು ನಿಲ್ಲಿಸಿ ವಿಚಾರಿಸಿದಾಗ ಈತ ನೀಡಿದ ಉತ್ತರ `ನಾನು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದೇನೆ ನನ್ನನ್ನು ಬಿಟ್ಟು ಬಿಡಿ’ ಎಂದು ವಿನಂತಿಸಿದ. ಈ ವೇಳೆ ಆತನ ಮಾನಸಿಕ ಸ್ಥಿತಿಗತಿಯನ್ನು ಅರ್ಥಮಾಡಿಕೊಂಡ ರಾಝಿಕ್ ಈತನಲ್ಲಿ ಹೆಸರು ವಿಳಾಸ ವಿಚಾರಿಸಿದಾಗ ಆತನದ್ದು ಸಿಕ್ಕಿದ್ದು ಬರೇ ಮೌನ ಮಾತು..! ಆದರೂ ತನ್ನ ಕಣ್ಣಿಗೆ ಬಿದ್ದ ಅಲೆಮಾರಿಯಂತೆ ಅತ್ತಿತ್ತ ಓಡಾಡುವ ಆ ಮನೋರೋಗಿಯನ್ನು ಹಟ ಬಿಡದೆ ರಾಝೀಕ್ ಚಾಣಕ್ಷತೆಯಿಂದ ಸೌಮ್ಯತನದಿಂದ ವಿಚಾರಿಸಿದಾಗ ಆತನು ಮೂಕನಾಗಿಯೇ ವರ್ತಿಸುತ್ತಿದ್ದ. ಮಾನಸಿಕ ಅಸ್ತಿತ್ವವನ್ನು ಕಳಕೊಂಡು ಓಡುತ್ತಿರುವ ಆತನನ್ನು ರಾಝಿಕ್ ತನ್ನ ಕಾರಿನಲ್ಲೇ ಕರಕೊಂಡು ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಮೂರು ತಿಂಗಳ ಕಾಲ ಅಲ್ಲಿನ ವೈದ್ಯಧಿಕಾರಿ ಡಾ| ಶ್ರೀನಿವಾಸ್ ಭಟ್ ಅವರ ಸಹಯೋಗದೊಂದಿಗೆ ಚಿಕಿತ್ಸೆ ಕೊಡಿಸಿದರು. ಈಗ ಅಕ್ತರ್ ಶೇಖ್ ತನ್ನ ದೇಹದ ಶುಚಿತ್ವವನ್ನು ಸ್ವಯಂ ನಿರ್ವಾಹಿಸುತ್ತಿದ್ದು, ಬಹುತೇಕ ಗುಣಮುಖ ಆಗಿರುವುದು ಸರ್ವರಲ್ಲೂ ಸಂತಸ ಮೂಡಿಸಿದೆ.ಇದೀಗಆತನಲ್ಲಿ ಆತ್ಮೀಯವಾಗಿ ವಿಳಾಸ ಮತ್ತಿತರ ಮಾಹಿಗಳನ್ನು ಕೇಳಲಾಗಿದ್ದು ಕೊನೆಗೂ ಆತಎಚ್ಚೆತ್ತು ತನ್ನ ಅಂತರಾಳದ ನುಡಿಗಳನ್ನು ಮನಬಿಚ್ಚ ತೊಡಗಿದಾಗ ಹಿಂದಿ ಭಾಷೆಯಲ್ಲಿ ತನ್ನ ಮನೆಯ ಸಂಪೂರ್ಣ ವಿಳಾಸ, ತಂದೆ ತಾಯಿಯ ಹೆಸರು ಸರಿಯಾಗಿ ಅಕ್ಬರ್ ನೀಡಿದ. ತಾನು ಮೂಲತ: ಮಹಾರಾಷ್ಟ್ರದ ಮೀರಾಜ್ ತಾಲೂಕು ಅಲ್ಲಿನ ವಿ.ಜೆ ಪವಾರ್ ಮತ್ತು ನೀಝಾ ಮುನೀಶಾ ಶೇಖ್ ದಂಪತಿ ಪುತ್ರನಾಗಿದ್ದು, ನನ್ನ ಹೆಸರು ಅಕ್ತರ್ ಮೊಹಮ್ಮದ್ ಶೇಖ್ ಎಂಬುವುದಾಗಿ ತಿಳಿಸಿರುವನು.
Akthar M.sheikh Miraj (Befor)

Akthar M.sheikh Miraj (Now)
ಆತನ ವಿಳಾಸ ಪಡೆದ ರಾಝೀಕ್ ಉಳ್ಳಾಲ ಪೋಲಿಸರಿಗೆ ಮಾಹಿತಿ ನೀಡಿ ಅವರಿಂದ ಮಹಾರಾಷ್ಟ್ರದ ಮೀರಾಜ್ ಪೊಲೀಸ್ ಸಂಪರ್ಕ ನಡೆಸಿ ಆತನ ಪಾಲಕರು ಮತ್ತು ಸೂಕ್ತವಿಳಾಸ ಖಚಿತ ಪಡಿಸುವಲ್ಲಿ ಯಶಸ್ವೀ ಆಗಿದ್ದಾರೆ. ಆದರೆ ಅಕ್ತರ್‍ನ ತಂದೆ ತಾಯಿ ಮತ್ತು ಪರಿವಾರ ಮಾತ್ರ ಅಕ್ಬರ್ ಶೇಖ್ ನಮಗೆ ಬೇಕಾಗಿಲ್ಲ. ಆತನನ್ನು ಸ್ವೀಕರಿಸಲು ಪೋಷಕರು ನಿರಾಕರಿಸಿದ್ದಾರೆ. ಮತ್ತೆ ಮತ್ತೆ ಅಕ್ತರ್ ಪಾಲಕರಲ್ಲಿ ಆತನನ್ನು ಕರಕೊಂಡು ಹೋಗಿ ಎಂದೂ ಸಮಜಾಯಿಸಿದರೂ ಅಕ್ತರ್‍ನ ತಾಯಿಯಿಂದ ದೊರೆತ ಉತ್ತರ ಇಷ್ಟೇ… ನಮಗೆ ಆತ ಬೇಡವೆ ಬೇಡ. ದಯವಿಟ್ಟು ಆತನನ್ನು ಬೇರೆ ಕಡೆ ಬಿಟ್ಟು ಬಿಡಿ ಎಂದು. ತಾಯಿ ಈ ರೀತಿ ಹೇಳಲು ಕಾರಣ ಇಷ್ಟೇ. ಅಕ್ತರ್ ಅನಾರೋಗ್ಯಕ್ಕೀಡಾದಾಗ ನೀಡಿದ ಕಿರುಕುಳ ಮನೆ ಮಂದಿಗೆಲ್ಲಾಹಿಂಸಾತ್ಮಕವಾಗಿದ್ದು ಅವುಗಳಿಂದ ಮುಕ್ತರಾಗಲು ಅವಹನಿಸುದ್ದರು. ಅತೀವ ತೊಂದರೆ ನೀಡುತ್ತಿದ್ದ ಅಕ್ತರ್‍ನ ಹಳೆ ನೆನಪುಗಳು ಇನ್ನೂ ಮಾಸಿಹೋಗದೆ ಬೇಸತ್ತ ಕುಟುಂಬಸ್ಥರು ಇನ್ನೂ ತಮ್ಮ ಮನೋಸ್ಥಿತಿಯಿಂದ ಹೊರಬಂದಿಲ್ಲ. ಅವನು ಮತ್ತೊಮ್ಮೆ ಮನೆ ಸೇರಿದರೆ ಹಳೆ ಚಾಳಿಯೇ ಮುಂದುವರಿಸಿದರೆ ಪುನಃ ಕುಟುಂಬ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಭಯದ ಭೀತಿ ಅವರಲ್ಲಿ ಆವರಿಸಿದೆ. ನಿಮ್ಮ ಮಗ ಅಕ್ತರ್ ಶೇಖ್ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಅತನನ್ನು ನೀವು ಬಂದು ಕರೆಕೊಂಡು ಹೋಗಿಯಮ್ಮ ಎಂದು ರಾಝೀಕ್ ಉಳ್ಳಾಲ್ ಮನೆಗೆ ಮತ್ತೆಮತ್ತೆ ನೀಝಾ ಮುನೀಶಾ ಮನೆಗೆ ಫೋನ್ ಮೂಲಕ ಸಂಪರ್ಕಿಸಿ ಹೃದಯಪೂರ್ವಕವಾಗಿ ವಿನಂತಿಸಿ ನಮ್ರ ವಿನಂತಿ ಮಾಡಿ ಕೊಂಡರೂ ಅವರ ಹೃದಯ
ಕರಗಿ ಹೋಗದಿರುವುದು ದುರಂತವೇ ಸರಿ. ಅದೆಷ್ಟೋ ದಂಪತಿಗಳು ಮಕ್ಕಳಿಗಾಗಿ ಜೀವಮಾನವನ್ನೇ ಮುಡುಪಾಗಿರಿಸುವ ತಂದೆ ತಾಯಿಗಳು ಜೀವ ಕೊಡುವ ಈ ಸಂದರ್ಭದಲ್ಲಿ ಮಗನೇ ಬೇಡ ಎನ್ನುವ ಶಬ್ದ ತಾಯಿಯ ಬಾಯಿಂದ ಕಿವಿಗೆ ಬಿದ್ದರೆ ಕಲ್ಲುಹೃದಯ ಕೂಡಾ ಕರಗಿ ಹೋಗುತ್ತಿದೆ ಎನ್ನುತ್ತಾರೆ ರಾಝೀಕ್ ಉಳ್ಳಾಲ. ಅನಾಥರ ಪಾಲಿನ ಆಶಾಕಿರಣ ರಾಝೀಕ್ ಉಳ್ಳಾಲ ನಿಮ್ಮ ಮಗ ಮಾನಸಿಕ ರೋಗದಿಂದ ಮುಕ್ತನಾಗಿದ್ದಾನೆ. ಆತನಿಗೆ ಯಾವುದೆ ಸಮಾಸ್ಯೆ ಈಗಿಲ್ಲ. ಐದು
ತಿಂಗಳು ಚಿಕ್ಸಿತೆ ನೀಡಿ ಆತನನು ಬಿಟ್ಟು ಬಡಲು ಯಾರಿಗೂ ಮನಸ್ಸುಬಾರದು. ಈತನಿಗೆ ಸಹಾಯ ಮಾಡುವ ದಾನಿಗಳು, ಸಂಘಟನೆಗಳು ಇದ್ದಲ್ಲಿದಯವಿಟ್ಟು ಸಹಕರಿಸಿ. ಈ ಪ್ರಕಟನೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕದಿದ್ದಲ್ಲಿಬೆಂಗಳೂರು ಅಲ್ಲಿನ ಆಟೋರಾಜ ಆಶ್ರಮಕ್ಕೆ ದಾಖಲಿಸುವ ಚಿಂತನೆ ನಡೆಸಲಾಗುತ್ತಿದೆ. ಅಲ್ಲಿ ಈತನನ್ನು ಉತ್ತಮ ರೀತಿಯಲ್ಲಿನೊಡಿಕೊಳ್ಳುವ ಭರವಸೆ ಹಾಗೂ ಅಕ್ತರ್ ಶೇಖ್ ಕೂಡಾ ಜನಸಾಮನ್ಯರಂತೆ ಸರ್ವೋಕೃಷ್ಟ ಮಾನವನಾಗಿ ಬಾಳುವ ಆಶಯವನ್ನು ರಾಝೀಕ್ ವ್ಯಕ್ತ ಪಡಿಸಿದ್ದಾರೆ. ಆದರೆ ಈ ಬಗ್ಗೆ ಪತ್ರಕರ್ತ ಅರೀಫ್ ದೇರಳಕಟ್ಟೆ ಅವರು ನಗರದ ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರ ನೆರವು ಕೋರಿದ್ದು, ತಕ್ಷಣವೇ ಕಾರ್ಯನಿರತ ಬಂಟ್ವಾಳ್ ಮೀರಾಜ್‍ನ ತುಳು ಕನ್ನಡಿಗ ಮುಂದಾಳು ಶ್ರೀನಿವಾಸ ಮಾಂಕುಡೆ ಅವರನ್ನು ಸಂಪರ್ಕಿಸಿ ಮೀರಾಜ್‍ನಹೆಸರಾಂತ ತಜ್ಞಡಾ| ನೈಮ್ ಶೇಖ್ ಸಂಪರ್ಕದಲ್ಲಿದ್ದು ಪುನರ್‍ಜನ್ಮ ಪಡೆದ ಅಕ್ತರ್ ಶೇಖ್‍ಗೆಮತ್ತೆ ತನ್ನ ಹುಟ್ಟೂರಮನೆಗೆ ತಲುಪಿಸಿ ಹೊಸ ಬಾಳನ್ನು ಕಲ್ಪಿಸುವಲ್ಲಿ ಸಕ್ರೀಯರಾಗಿದ್ದಾರೆ.

By Suddi9

Leave a Reply

Your email address will not be published. Required fields are marked *