ಕಿನ್ನಿಗೋಳಿ:ಇಂದು ಬೆಳಿಗ್ಗೆ ಸುರಿದ ಗಾಳಿ ಮಳೆಗೆ, ಕಿನ್ನಿಗೋಳಿ,ಮುಲ್ಕಿ ರಾಜ್ಯ ಹೆದ್ದಾರಿಗೆ ಅಡ್ದವಾಗಿ ಕೆರೆಕಾಡು ಕುಕ್ಕುದ ಕಟ್ಟೆ ಯಲ್ಲಿ ದೊಡ್ದ ಗಾತ್ರದ ದೂಪದ ಮರವೊಂದು ಬಿದ್ದು ವಾಹನ ಸಂಚಾರ ಸ್ಥಗಿತ ಘಟನೆ ಇಂದು ನಡೆದಿದೆ.


ಮುಲ್ಕಿಯಿಂದ ಕಿನ್ನಿಗೋಳಿ ಕಟೀಲು, ನಿಡ್ಡೊಡಿಗೆ ಹಾದು ಹೋಗುವ ಮುಖ್ಯ ವಿದ್ಯುತ್ ತಂತಿಯ ಮೇಲೆ ಬಿದ್ದು ಎರಡು ಕಂಬ ಮುರಿದು ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಕಿನ್ನಿಗೋಳಿ ಮೆಸ್ಖಂ ಅಧಿಕಾರಿಗಳು ಬೇಟಿ ನೀಡಿ ಮರವನ್ನು ತೆರವುಗೊಳಿಸಿದರು, ಸುಮಾರು ೪ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.




