ಕಿನ್ನಿಗೋಳಿ:ಮುಲ್ಕಿ ಸಮೀಪದ ಕೆರೆಕಾಡುನಲ್ಲಿ ದಿನದ ಹಿಂದೆ ಸುರಿದ ಗಾಳಿ ಮಳೆಗೆ ೨೯ ಮನೆಗಳು ಹಾನಿಗೊಳಗಾಗಿದ್ದು ಸಚಿವ ಜೈನ್ ಬೇಟಿ ನೀಡಿದರುಹಾನಿಗೊಳಗಾದ ಮನೆಗಳಿಗೆ ಬೇಟಿ ನೀಡಿ ಮನೆಯವರನ್ನು ಸಂತೈಸಿದರು, ಜಿಲ್ಲಾಡಳಿತದಿಂದ ಬಿಡುಗಡೆಗೊಂಡ ಚೆಕ್ ನ್ನು ವಿತರಿಸಿದರು.
cheqe vitarane (1)

cheqe vitarane
ವಿಜಯಲಕ್ಷ್ಮೀ, ಶಂಹರ ಅವರಿಗೆ ತಲಾ ೯೫ ಸಾವಿರ, ಬಾಲಕ್ರಷ್ಣ ಅವರಿಗೆ ೬೫ ಸಾವಿರ ಮತ್ತು ೨೬ ಜನರಿಗೆ ತಲಾ ೫೨೦೦ ರಂತೆ ಚಕ್ ವಿತರಣೆ ಮಾಡಿದರು ನಂತರ ಮಾತನಾಡಿ ಘಟನೆ ನಡೆದು ಕೇವಲ ೨೪ ಘಂಟೆಯ ಒಳಗೆ ಪರಿಹಾರ ಕೊಡುವ ಕೆಲಸ ಮಾಡಿದ್ದೇನೆ, ಹಿಂದಿನಂತೆ ಗರಿಷ್ಟ ಮೊತ್ತವನ್ನು ಬಿಡುಗಡೆ ಮಾಡಿದ್ದೇನೆ ಎಂದರು ಈ ಸಂದರ್ಭ ಕಂದಾಯ ನಿರೀಕ್ಷಕ ಎ.ಸಿ. ಅಶೋಕನ್, ನಿತ್ಯಾನಂದದಾಸ್, ಗ್ರಾಮ ಕರಣೀಕ ರಾಘವೇಂದ್ರ ಪೈ, ಕಾಂಗ್ರೇಸ್ ಮುಖಂಡರಾದ ಗೋಪಿನಾಥ್ ಪಡಂಗ, ಯೋಗೀಶ್ ಕೋಟ್ಯಾನ್, ಗ್ರಾಮ ಪಂಚಾಯತ್ ಸದಸ್ಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *