ಬಂಟ್ವಾಳ: ತಾಲೂಕಿನಲ್ಲಿ ಡೆಂಗ್ಯೂ ಜ್ವರ ಉಲ್ಬಣಿಸುತ್ತಿದೆ. ನೂರಾರು ಮಂದಿಗೆ ಜ್ವರ ಬಾಧಿಸಿದೆ ಎಂದು ಇಲಾಖಾ ಮಾಹಿತಿ ನೀಡಿದೆ. ಜ್ವರ ಇನ್ನಷ್ಟು ಉಲ್ಬಣಗೊಳ್ಳದ ರೀತಿಯಲ್ಲಿ ತಡೆಗಟ್ಟಲು ಸಂಬಂದಪಟ್ಟ ಸ್ಥಳೀಯ ಇಲಾಖೆಗಳು ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದಾರೆ.

DSC_7157

DSC_7137

DSC_7154ಎಲ್ಲೂ ಕೂಡಾ ಕೊಳಕು ನೀರು ನಿಲ್ಲಬಾರದು, ಅಂಗಡಿ ಮಾಲಕರು ಮತ್ತು ಹೊಟೇಲ್ ನಡೆಸುವವರು ಕೂಡಾ ಸ್ವಚ್ಚತೆಗೆ ಹೆಚ್ಚು ಗಮನ ಕೊಡಬೇಕು, ಇಲ್ಲದಿದ್ದರೆ ಅವರ ವಿರುದ್ದ ಸುಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ರಸ್ತೆ ಬದಿಯಲ್ಲಿ ಕಸ ಹಾಕುವವರ ವಿರುದ್ದ್ ಯಾರು ಕ್ರಮ ಕೈಗೊಳ್ಳುತ್ತಾರೆ. ಇಲ್ಲಿನ ಬಂಟ್ವಾಳ ಕೊಟ್ರಮನ ಗುಂಡಿಯ ಬಳಿಯಲ್ಲಿ ಚರಂಡಿಯಲ್ಲಿ ಕೊಳಕು ನೀರು ಹರಿಯುತ್ತಿದ್ದು ಸಾಂಕ್ರಮಿಕ ರೋಗದ ಮೂಲ ತಾಣವಾಗಿ ಬೆಳೆಯುತ್ತಿದೆ. ಸಾಲದ್ದಕ್ಕೆ ಅಲ್ಲೇ ಸಾರ್ವಜನಿಕರು ಕಸವನ್ನು ತಂದು ಎಸೆಯುತ್ತಾರೆ. ಸರಿಯಾದ ಕಸ ವಿಲೇವಾರಿ ಸಾಧ್ಯವಾಗದ ಹಿನ್ನಲೆಯಲ್ಲಿ ಜನರು ಕಸವನ್ನು ಸಿಕ್ಕ ಸಿಕ್ಕಲ್ಲಿ ತಂದು ಎಸೆಯುತ್ತಾರೆ. ಹಾಗಾಗಿ ಪುರಸಭಾ ವ್ಯಾಪ್ತಿಯ ಎಲ್ಲಾ ಕಡೆ ಕೊಳೆತ ತ್ಯಾಜ್ಯ ನಾರುತ್ತಿದ್ದು, ಜನರು ಸಾಂಕ್ರಮಿಕ ರೊಗದ ಭೀತಿಯಲ್ಲಿದ್ದಾರೆ. ಡ್ರೈನೇಜ್ ನೀರು ಇಲ್ಲಿ ನಿಂತು ಗಬ್ಬು ವಾಸನೆ ಬರುತ್ತಿದೆ ಎಂದು ಇಲ್ಲಿನ ವಾಹನ ಚಾಲಕರು ಪುರಸಭೆಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಭರವಸೆಯ ಮಾತುಗಳನ್ನಾಡಿದ್ದಾರೆ, ಈವರೆಗೆ ಮಾತ್ರ ಸಮಸ್ಯೆಗೆ ಪರಿಹಾರ ಮಾತ್ರ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *