ಧರ್ಮಸ್ಥಳ: ಪಂಜಾಬ್ ನ್ಯಾಶನಲ್ ಬ್ಯಾಂಕಿನ ಆರ್ ಸೆಟಿ ನಿರ್ಧೇಶಕರುಗಳ 5ನೇ ವಾರ್ಷಿಕ ಸಮಾವೇಶವನ್ನು ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ರೇಣುಕಾ ಕುಮಾರ್ ಉದ್ಘಾಟಿಸಿದರು. ಪ್ರೊ.ಎಸ್. ಪ್ರಭಾಕರ್, ಕೆ.ಎನ್. ಜನಾರ್ದನ್, ಎನ್.ಕೆ. ಮಿತ್ತಲ್, ಟಿ.ಪಿ. ಜಗದೀಶ ಮೂರ್ತಿ , ವಿ.ಕಲಕುಂದ್ರಿ ಮೊದಲಾದವರು ಉಪಸ್ಥಿತರಿದ್ದರು.
ಪಂಜಾಬ್ ನ್ಯಾಶನಲ್ ಬ್ಯಾಂಕಿನ ಆರ್ಸೆಟಿ ನಿರ್ಧೇಶಕರುಗಳ 5ನೇ ವಾರ್ಷಿಕ ಸಮಾವೇಶವನ್ನು ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ರೇಣುಕಾ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಆರ್ಸೆಟಿಗಳ ಪಾತ್ರವನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಅಧ್ಯಕ್ಷತೆ ವಹಿಸಿ ಶುಭಾಶಂಸನೆ ಮಾಡಿದರು.
ಆರ್ಸೆಟಿಗಳ ನಿರ್ವಹಣಾ ಘಟಕದ ಮುಖ್ಯ ಯೋಜನಾ ಸಂಯೋಜಕ ಕೆ.ಎನ್. ಜನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಉಪ ಮಹಾಪ್ರಬಂಧಕ ಎನ್.ಕೆ. ಮಿತ್ತಲ್, ಕಾರ್ಯನಿರ್ವಾಹಕ ನಿರ್ಧೇಶಕ ಟಿ.ಪಿ. ಜಗದೀಶ ಮೂರ್ತಿ , ವಿ.ಕಲಕುಂದ್ರಿ ಮೊದಲಾದವರು ಉಪಸ್ಥಿತರಿದ್ದರು.


