ಮುಂಬಯಿ: ಮುಂಬಯಿ ನಗರದ ತುಳು ಕನ್ನಡಿಗರ ಕಣ್ಮಣಿ, ಆರಕ್ಷಕ ಕ್ಷೇತ್ರದ ಮಂತ ಶಕ್ತಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ವೃತ್ತಿ ಬದುಕಿನಲ್ಲಿ ಒಂದು ಮಹತ್ವದ ಮೈಲಿಗಲ್ಲು ದಾಟಿ ಬಂದು ಹೊಸ ಉನ್ನತ ಹುದ್ದೆಗೇರಿದ್ದಾರೆ. ಅವರು ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ಉಪಾಯುಕ್ತ (ಅಡಿಷನಲ್ ಡೆಪ್ಯುಟಿ ಕಮಿಶನರ್) ಹುದ್ದೆಗೆ ಭಡ್ತಿ ಪಡೆದಿರುವುದು ಅವರ ಶ್ರಮ, ಸಾಧನೆಗೆ ಸಂದ ಫಲ. ಪ್ರಕಾಶ್ ಭಂಡಾರಿ ಅವರ ಈವರೆಗಿನ ಬದುಕಿನ ದಾರಿ ಕೇವಲ ಹೂವಿನ ಹಾಸಿಗೆಯಾಗಿರಲಿಲ್ಲ. ಅಲ್ಲಿ ಕಲ್ಲು ಮುಳ್ಳುಗಳೂ ಸಾಕಷ್ಟಿದ್ದವು. ಎಂಥ ಸವಾಲುಗಳಿಗೂ ಎದೆಯೊಡ್ಡುವ ಜಾಯಮಾನದ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿರುವ ಇವರು ಎಷ್ಟೋ ಬಾರಿ ಪ್ರವಾಹದ ವಿರುದ್ಧವೂ ಈಜಿ ಗೆದ್ದು ಬಂದವರು. ಮೂಲತಃ ಬಂಟ್ವಾಳದವರು ಪ್ರಕಾಶ್ ಭಂಡಾರಿ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಿಲ್ಲೂರಗುತ್ತು ಗಣ್ಯ ಬಂಟ ಮನೆತನದ ಭುಜಂಗ ಭಂಡಾರಿ ಹಾಗೂ ಅಡ್ಯಾರುಗುತ್ತು ಕುಸುಮಾ ಭಂಡಾರಿ ದಂಪತಿಯ ಪುತ್ರ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಕನ್ನಿಕಂಬಳದ ಪ್ರೈಮರಿ ಶಾಲೆಯಲ್ಲಿ ಮುಗಿಸಿ ಹಲವು ಕನಸುಗಳನ್ನು ಹೊತ್ತು ಮುಂಬಯಿಗೆ ಬಂದಿಳಿದರು.
Praksha Bhandary

Prakash Bhandary
ಇಲ್ಲಿನ ಕನ್ನಡ ಭವನ ಹೈಸ್ಕೂಲ್ ನಲ್ಲಿ ಎಸ್.ಎಸ್.ಸಿ. ಮುಗಿಸಿ, ಕೆ.ಪಿ.ಬಿ. ಹಿಂದುಜಾ  ಕಾಲೇಜಿನಲ್ಲಿ ಬಿ.ಕಾಂ. ಮತ್ತು ನ್ಯೂ  ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಮುಂಬಯಿ ಮಹಾನಗರದಲ್ಲಿ ಬಂಟರೆಂದರೆ ಹೊಟೇಲ್ ಉದ್ಯಮಿಗಳೆಂದೇ ಪರಿಚಿತರು. ಶೇ. 80ರಷ್ಟು ಹೊಟೇಲುಗಳು ಬಂಟರದ್ದಾಗಿದೆ. ಪ್ರಕಾಶ್ ಭಂಡಾರಿ ಅವರು ಉದ್ಯಮಕ್ಕಿಂತ ಹೊರತಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸಿದವರು. ತನ್ನಲ್ಲಿ ಹುದುಗಿರುವ ಚಾಣಾಕ್ಷತೆ, ಬುದ್ಧಿಶಕ್ತಿ, ಶೌರ್ಯ, ಸಾಹಸದ ಮೂಲಕ ಅವರು ಪೊಲೀಸ್ ಅಧಿಕಾರಿಯಾಗಿ ಸರಕಾರಿ ಸೇವೆಯ ಮೂಲಕ ಜನಸೇವೆಗೆ ಮುಂದಾದರು. ವೃತ್ತಿ ರಂಗದಲ್ಲಿ 1984ರ ಸುಮಾರಿಗೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದ ಪ್ರಕಾಶ ಭಂಡಾರಿ ಅವರು ಪೊಲೀಸ್ ಇಲಾಖೆಯನ್ನು ಪ್ರವೇಶಿಸಿದ ರೀತಿಯೇ ಒಂದು ಗಟ್ಟಿ ಶಕ್ತಿಯಾಗಿತ್ತು. ಮಹಾರಾಷ್ಟ್ರ ಪಬ್ಲಿಕ್ ಸರ್ವೆಸ್ ಕಮಿಷನ್ ನಡೆಸಿದ್ದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಆಯ್ಕೆಯ ಸ್ಪರ್ಧಾ ಕೂಟದಲ್ಲಿ ಮಹಾರಾಷ್ಟ್ರ ವಲಯದಲ್ಲಿ ಪ್ರಥಮ ಸ್ಥಾನ ಪಡೆದು 1985ರಲ್ಲಿ ಇಲ್ಲಿನ ಪೊಲೀಸ್ ಅಕಾರಿ ಪಡೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇರಿಕೊಂಡರು. ಭಂಡಾರಿ ಅವರನ್ನು ಪ್ರಥಮ ಸೇವಾ ಕ್ಷೇತ್ರವಾಗಿ ಥಾಣೆ ಕಮಿಷನರೇಟ್ ಅನದ ಪನ್ವೇಲ್ನ ಹಿಂದೂ – ಮುಸ್ಲಿಂ ಗಲಭೆಯ ಅತ್ಯಂತ ಪ್ರಕ್ಷುಬ್ಧ ಕ್ಷೇತ್ರಕ್ಕೆ ನಿಯೋಜಿಸಲಾಗಿತ್ತು. ಆ ಬಳಿಕ ಅಂಥದ್ದೇ ಮತ್ತೊಂದು ಗಲಭೆಯ ಕಲ್ಯಾಣ – ಅದು ಕಲ್ಯಾಣದ ಬಜಾರ್ ಪೇಟ್ ಪೊಲೀಸ್ ಠಾಣೆ. ಎದೆಗುಂದದೆ ಅಲ್ಲೆಲ್ಲ ಕಾರ್ಯನಿರ್ವಹಿಸಿದ ಭಂಡಾರಿ ಅವರನ್ನು 1987ರಲ್ಲಿ ಲ್ಯಾಮಿಂಗ್ಟನ್ ರೋಡ್ನ ಡಾ| ಡಿ. ಬಿ. ಮಾರ್ಗ ಪೊಲೀಸ್ ಠಾಣೆಗೆ ವರ್ಗಯಿಸಲಾಯಿತು. 1989ರ ಒಂದು ಕೆಟ್ಟ ಘಳಿಗೆಯಲ್ಲಿ ಹೊಟೇಲ್ ಒಂದರಲ್ಲಿ ನಡೆದ ದುರ್ಘಟನೆಯಲ್ಲಿ ಭಂಡಾರಿ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದರು. ಅಲ್ಲಿ ಸೇವಾ ಅವಯಲ್ಲಿ ಜೀವನದ ಹಂಗು ತೊರೆದು ದುಷ್ಟರೊಂದಿಗೆ ಕಾದಾಡಿದ ಪ್ರಕಾಶ್ ಭಂಡಾರಿ ಅವರು ಆ ದಿನಗಳನ್ನು ಈಗಲೂ ನೆನಪಿಸುತ್ತಾರೆ. ಅದೇ ದಿವಸಗಳಲ್ಲಿ ಆ ವಠಾರದಲ್ಲಿ ನಡೆಯುತ್ತಿದ್ದ ವೇಶ್ಯಾವೃತ್ತಿ… ಅಮಾಯಕ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ಉಪಯೋಗಿಸಿಕೊಳ್ಳುತ್ತಿದ್ದ ದುಷ್ಟ ಶಕ್ತಿಗಳು…. ಇವರಿಗೆಲ್ಲ ಪ್ರಕಾಶ್ ಭಂಡಾರಿ ಸಿಂಹ ಸ್ವಪ್ನವಾಗಿ ಕಾಡಿದರು. ಅನೇಕ ಹುಡುಗಿಯರನ್ನು ಅಲ್ಲಿನ ಕೊಳಕು ವಠಾರದಿಂದ ರಕ್ಷಿಸಿ ಅವರವರ ಮಾತೃ ಸ್ಥಳಕ್ಕೆ ಕಳುಹಿಸುವ ಏಪರ್ಾಡು ಮಾಡಿದರು. 1992ರಲ್ಲಿ ಎಲ್ಲೆಲ್ಲೂ ಸುದ್ದಿ ಹರಡಿದ್ದ ವಿದ್ರೋಹಿಗಳ ನೆಲೆವೀಡು, ಗಲಾಟೆಗಳ ಕೇಂದ್ರವಾಗಿದ್ದ ಮುಂಬಯಿಯ ಜೋಗೇಶ್ವರಿ ಪೊಲೀಸ್ ಇಲಾಖೆಯ ಸಂಕೀರ್ಣದಲ್ಲಿ ಡೇರ್ ಡೇವಿಲ್ ಎಂದೇ ಖ್ಯಾತಿ ಪಡೆದಿದ್ದ ಸೀನಿಯರ್ ಪಿ. ಐ. ಆನಂದ ಮುಂಡ್ಕೂರು ಅವರ ಜತೆಗಾರರಾಗಿ ಅಲ್ಲಿಯ ದುಷ್ಟ ಶಕ್ತಿಗಳಿಗೆ ಎದುರಾಗಿ ಹೋರಾಡಿದ ಕೀತರ್ಿ ಭಂಡಾರಿ ಅವರಿಗಿದೆ. 1994ರಲ್ಲಿ ಗಾಂವ್ದೇವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಕುಖ್ಯಾತ ಡಕಾಯಿತ ಸನ್ನಿ ಡ್ಯಾನ್ಸರ್ನನ್ನು ಬಂಸಿದ್ದರು. ಅನಂತರ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದು ಸಹಾರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದರು. 90ರ ದಶಕದಲ್ಲಿ ಮುಂಬಯಿಯ ನಗರವನ್ನು ಗಡ ಗಡ ನಡುಗುವಂತೆ ಮಾಡುತ್ತಿದ್ದ ಭೂಗತ ಪಾತಕಿಗಳ ಜಗತ್ತು, ಅಂತರ್ರಾಷ್ಟ್ರೀಯ ಖ್ಯಾತಿಯ ಪಾತಕಿಗಳು, ಮಾಯಾ ದೊರೆಗಳು ತಮ್ಮ ಅಪರಾ ವಲಯದ ಕೇಂದ್ರವನ್ನಾಗಿ ಮುಂಬಯಿಯನ್ನು ಅರಸಿಕೊಂಡು ನಿರ್ಭಂಡೆಯಿಂದ ತಮ್ಮ ಕಾರುಬಾರನ್ನು ನಿರ್ವಹಿಸುತ್ತಿದ್ದರು.     ಇದೇ ಸಂದರ್ಭದಲ್ಲಿ ಅಡಿಶನಲ್. ಸಿ. ಪಿ. ಡಾ| ಸತ್ಯಪಾಲ ಸಿಂಗ್ ಅವರು ಆ್ಯಂಟಿ ಎಕ್ಸ್ಟೋರ್ಶನ್ ಎಂಬ ಪಡೆಯನ್ನು ಕಾರ್ಯರೂಪಕ್ಕೆ ತಂದು ಅಪರಾ ವಲಯದ ನಿರ್ಮೂಲನಕ್ಕೆ ನಾಂದಿ ಹಾಡಿದರು. ಈ ಸಂದರ್ಭದಲ್ಲಿ ಅಂದರೆ, 1998ರಲ್ಲಿ ಭಂಡಾರಿ ಅವರು ಎಸ್ಬಿಐಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಅಲ್ಲಿನ ಇವರ ಉತ್ತಮ ಕಾರ್ಯಕ್ಷಮತೆಯನ್ನು ಗಮನಿಸಿದ ಡಿಸಿಪಿ ಕೆ. ಎಲ್. ಪ್ರಸಾದ್ ಅವರು ತಮ್ಮ ನೇತೃತ್ವದ ಬಳಗ, ಅದರಲ್ಲೂ ಖ್ಯಾತ ಪ್ರದೀಪ್ ಶರ್ಮಾ  ಅವರ ಜತೆ ಜೋನಲ್ ಸ್ಕ್ವಾಡ್ನಲ್ಲಿ ಸೇರಿಸಿಕೊಂಡರು. ಅಲ್ಲಿಂದ ಪ್ರಾರಂಭವಾಯಿತು – ಪ್ರಕಾಶ್ ಭಂಡಾರಿ ಅವರ ಯಶೋಗಾಥೆಯ ದ್ವಿತೀಯ ಹಂತ. ಪ್ರಕಾಶ್ ಭಂಡಾರಿ, ಪ್ರದೀಪ್ ಶರ್ಮಾ ಅರುಣ್ ಬೋರುಡೆ, ದಯಾ ನಾಯಕ್ ಕೂಟವು ಭಯೋತ್ಪಾದಕರ ಎದೆಯಲ್ಲಿ ನಡುಕ ಹುಟ್ಟಿಸಿತು. ಮತ್ತೆ 2000ದಲ್ಲಿ ಈ ನಾಲ್ವರು ಡಿಸಿಬಿ ಸಿಐಡಿಯ ಕ್ರೈಂ ಇಂಟಲಿಜೆನ್ಸ್ ಯೂನಿಟ್ನಲ್ಲಿ ಒಟ್ಟಾಗಿ ಉತ್ತಮ ಕಾರ್ಯ ನಿರ್ವಹಿಸಿದರು.  2003ರಲ್ಲಿ ಪ್ರಕಾಶ್ ಭಂಡಾರಿ ಅವರು ಇನ್ಸ್ಪೆಕ್ಟರ್ ಆಫ್ ಪೊಲೀಸ್ಗೆ ಭಡ್ತಿ ಪಡೆದು ಏರ್ಪೋರ್ಟ್  ಯೂನಿಟ್ನ ಕ್ರೈಂ ಬ್ರ್ಯಾಂಚ್ನಲ್ಲಿ ಸೇರಿಕೊಂಡರು. 2005ರಲ್ಲಿ ಮತ್ತೆ ನವಿಮುಂಬಯಿಗೆ ವರ್ಗಾವಣೆ, 2007ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನವಿಮುಂಬಯಿ ಶಾಖೆಯ ಸೆಕ್ಯುರಿಟಿ ಇನ್ಚಾರ್ಜ್ ಆಗಿ ಪದ ಸ್ವೀಕಾರ ಮಾಡಿದರು. 2008ರಿಂದ ಮಹಾರಾಷ್ಟ್ರ ಸರಕಾರದ ಸ್ಟೇಟ್ ಇಂಟಲಿಜೆನ್ಸ್ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ಈಗ ಮಹಾರಾಷ್ಟ್ರ ಸರಕಾರವು ಭಡ್ತಿ ಕೊಟ್ಟು ಹೆಚ್ಚುವರಿ ಉಪ ಆಯುಕ್ತರನ್ನಾಗಿ ನೇಮಕ ಮಾಡಿದೆ. ತಾನು ಮಾಡಿದ ಸಾಧನೆಗಳೇನಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ, ಯಾವುದೇ ಪ್ರಶಸ್ತಿ, ಸಮ್ಮಾನಗಳಿಗೆ ಹಾತೊರೆಯದೆ, ನಿಷ್ಠೆಯಿಂದ ಕಾರ್ಯನಿರತರಾಗಿರುವ ಅವರ ಗುಣ ಎಲ್ಲರಿಗೂ ಮೆಚ್ಚುಗೆಯಾಗುವಂಥದ್ದು. ಸಾಧನೆಯ ಹಾದಿಯಲ್ಲಿ ಹಂತ-ಹಂತವಾಗಿ ಮುಂದೆ ಬಂದ ನಿಷ್ಠಾವಂತ ಅಕಾರಿ ಹೆಮ್ಮೆಯ ಕನ್ನಡಿಗ ಪ್ರಕಾಶ್ ಭಂಡಾರಿ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹಾರ್ದಿಕ ಅಭಿನಂದನೆಗಳು. ಪೂರ್ಣಿ ಮಾ ಎಸ್. ಶೆಟ್ಟಿ.
ಇವರ ತಂಡವು ದುಷ್ಟ ಶಕ್ತಿಗಳು ಮತ್ತು ಕೊಲೆಗಡುಕರ ಮಾರಣ ಹೋಮ ನಡೆಸಿ ಭೂಗತ ಜಗತ್ತಿನ ಸದ್ದಡಗಿಸಿತು. ಪರಿಣಾಮ ಇವರೆಲ್ಲರೂ ಜನ ಮನ ಗೆದ್ದ ನಾಯಕರಾದರು. ಪ್ರಕಾಶ್ ಭಂಡಾರಿ ಅವರ ಎನ್ಕೌಂಟರ್ಗೆ 54 ಮಂದಿ ದೇಶದ್ರೋಹಿಗಳು ಮತ್ತು ಭಯೋತ್ಪಾದಕರು ಬಲಿಯಾಗಿದ್ದಾರೆ. ಪ್ರತಿಕೆಗಳು ಮಾಧ್ಯಮದವರು ಇವರನ್ನು ಭರ್ಜರಿ ಹೊಗಳಿದರು.  ಪ್ರಕಾಶ್ ಭಂಡಾರಿ ತುಳು-ಕನ್ನಡಿಗರ ಮನೆ ಮಾತಾದರು.
ವೃತ್ತಿಯಲ್ಲಿ ಪೊಲೀಸ್ ಅಕಾರಿಯಾದರೂ ಇವರಲ್ಲಿ ಸಂಸ್ಕೃತಿ ಪ್ರೀತಿಯೂ ಇತ್ತು. ಇವರು ಮುಂಬಯಿ ಕನ್ನಡಿಗರು ಕಂಡ ಅಪರೂಪದ ಸಾಂಸ್ಕೃತಿಕ ಹರಿಕಾರ. ಶಾಲಾ ಕಾಲೇಜಿನಲ್ಲಿ ಸಾಂಸ್ಕೃತಿಕ  ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡವರು. ದಿ| ಪ್ರೊ| ಸೀತಾರಾಮ್ ಶೆಟ್ಟಿ ಅವರ ಬೆಂಬಲ, ಮಾರ್ಗದರ್ಶನದಲ್ಲಿ, ಜನಪ್ರಿಯ ಲೇಖಕ, ನಿರ್ದೇಶಕ ಇಮ್ತಿಯಾಜ್ ಹುಸೇನ್ ಅವರ ಗರಡಿಯಲ್ಲಿ ಪಳಗಿ ಉತ್ತಮ ನಟನಾಗಿ ಹೊರಹೊಮ್ಮಿದವರು. ಗಾಡ್ ಈಸ್ ಎಲೈವ್, ಮರ್ಡರ್ ಆಫ್ ಗಾಡ್, ಜೀವ ಇನ್ನೂ ಅಳುತ್ತಿತ್ತು ನಾಟಕಗಳಲ್ಲಿ ಸತತ ಮೂರು ಬಾರಿ ಪ್ರೆಸಿಡೆಂಟ್ ಅವಾರ್ಡ್  ಪ್ರಶಸ್ತಿಗೆ ಭಾಜನರಾದವರು. ಕನ್ನಡ ಕಲಾಭಾರತಿ ಮುಖಾಂತರವೂ ಕಲಾರಸಿಕರ ಮನಗೆದ್ದವರು. ಗಿರೀಶ್ ಕಾರ್ನಾಡ್ ಅವರ `ಸಾಯೋ ಆಟ’ ಇವರಿಗೆ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. `ಪೆಟ್ಟಾಯಿ ಪಿಲಿ’ ತುಳು ಚಿತ್ರದಲ್ಲಿ, ಖ್ಯಾತ  ಚಿತ್ರ ನಟ ಅನಂತನಾಗ್ ಅಭಿನಯದ `ಅನಂತಪ್ರೇಮ’ ಚಿತ್ರದಲ್ಲಿ ನಟಿಸಿದ ಹೆಗ್ಗಳಿಕೆ ಇವರದು.

By suddi9

Leave a Reply

Your email address will not be published. Required fields are marked *