ಸುದ್ದಿ9 ಬಂಟ್ವಾಳ: ಮಾಚರ್್ 20 ರಂದುಬೆಂಜನ ಪದವಿನ ಕಲ್ಪನೆ ಎಂಬಲ್ಲಿ ಕೊಲೆಯಾದ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಸಂಘಟನೆಯ ಕಾರ್ಯಕರ್ತ ಬೆಂಜನಪದವು ನಿವಾಸಿ ರಾಜೇಶ್ ಪೂಜಾರಿಯ ಶೃದ್ಧಾಂಜಲಿ ಕಾರ್ಯಕ್ರಮವು ಬುಧವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭ ರಾಜೇಶ್ ಪೂಜಾರಿಯ ಪತ್ನಿ ಪಲ್ಲವಿಯವರಿಗೆ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ವತಿಯಿಂದ ರೂ. 1 ಲಕ್ಷ ನೀಡಲಾಯಿತು. ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಸರಪಾಡಿ, ಜಿಲ್ಲಾಧ್ಯಕ್ಷ ಡೀಕಯ್ಯ ಪೆರೋಡಿ, ಕಾರ್ಯದಶರ್ಿ ರಾಧಕೃಷ್ಣ ಭಟ್, ಸಂಯೋಜಕ ಗುರುರಾಜ್, ಕಾರ್ಯದಶರ್ಿ ಸುರೇಶ್, ಪುತ್ತೂರು ಜಿಲ್ಲಾ ಬಜರಂಗದಳ ಸಂಯೋಜಕ ಭಾಸ್ಕರ ಧರ್ಮಸ್ಥಳ, ಸುರಕ್ಷಾ ಪ್ರಮುಖ್ ಭರತ್ ಕುಮ್ಡೇಲು, ಜಿತೇಂದ್ರ ಕೊಟ್ಟಾರಿ, ರಾಜೇಶ್ ನಾಯಕ್ ಉಳಿಪಾಡಿಗುತ್ತು, ಜಿ. ಆನಂದ್, ಸತ್ಯಜಿತ್ ಸುರತ್ಕಲ್, ವಿಜೇತ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು
