ಬಂಟ್ವಾಳ : ಗೇರುಬೀಜ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾದ ಘಟನೆ ಜೂ.12ರಂದು ಸಂಭವಿಸಿದೆ.
ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ನಾಲೋಡಿ ನಿವಾಸಿ ಡೊಂಬಯ ಪೂಜಾರಿ ಅವರ ಪುತ್ರಿ ಗೀತಾ(18) ನಾಪತ್ತೆಯಾದ ಯುವತಿ.
ಬೆಳಗ್ಗೆ ಆಲದಪದವಿನ ಗೇರುಬೀಜ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿದಾಕೆ ಫ್ಯಾಕ್ಷರಿಗೂ ಹೋಗದೆ ಮನೆಗೂ ಮರಳದೆ ನಾಪತ್ತೆಯಾಗಿರುತ್ತಾಳೆ. ರಾತ್ರಿಯಾದರೂ ಮಗಳು ಮನೆಗೆ ಬಾರದಿರುವುದರಿಂದ ಸಂಬಂಧಿಕರ ಮನೆಯಲ್ಲಿ ಮನೆಯವರು ಹುಡುಕಾಡಿ ಯುವತಿಯ ತಾಯಿ ಡೀಕಮ್ಮ ಅವರು ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವತಿ ಸುಮಾರು 4 ಅಡಿ 5 ಇಂಚು ಎತ್ತರವಿದ್ದು ಸಾಧಾರಣ ಮೈಕಟ್ಟು ಹಾಗೂ ಎಣ್ಣಕಪ್ಪು ಮೈಬಣ್ಣ ಹೊಂದಿದ್ದು ಹಳದಿ ನೀಲಿ ಮಿಶ್ರಿತ ಟಾಪು ಹಾಗೂ ಹಸಿರು ಬಣ್ಣದ ಪ್ಯಾಂಟ್ನ ಚೂಡಿದಾರ ಧರಿಸಿರುತ್ತಾಳೆ.

