ಬಂಟ್ವಾಳ: ಮದುವೆ ನಿಶ್ಹಿತಾರ್ಥವಾಗಿದ್ದ ಯುವತಿ ಕಾಣೆಯಾದ ಘಟನೆ ಸಜೀಪ ನಡುವಿನಲ್ಲಿ ನಡೆದಿದೆ.
IMG_20150612_192052 copy
ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಮನೆಯ ಯುವತಿ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಜೀಪ ನಡು ಅಬ್ದುಲ್ ರಹಿಮಾನ್ ಅವರ ಹಿರಿಯ ಮಗಳು ಅಕ್ಷತ್ ಆಪ್ರೀನಾ (18) ಕಾಣೆಯಾಗಿರುವ ಯುವತಿ. ಜೂನ್ 10ರಂದು ಮನೆಯಲ್ಲಿ ಎಲ್ಲರೂ ಊಟ ಮಾಡಿ ಮಲಗಿದ್ದು ಜೂನ್ 11 ರಂದು ಬೆಳಿಗ್ಗೆ ಮುಂಜಾನೆ 5ಗಂಟೆಗೆ ಮನೆಯವರೆಲ್ಲರೂ ಒಟ್ಟಿಗೆ ಸೇರಿ ದಿನಂಪ್ರತಿ ಮಾಡುವ ನಮಾಜ್‍ಗಾಗಿ ಎಲ್ಲರನ್ನು ಕರೆಯುವಾಗ ಅಕ್ಷತ್ ಆಪ್ರೀನಾ ಬಾರದೆ ಇದ್ದಾಗ ಸಂಶಯ ಬಂದು ಅವಳು ಮಲಗುವ ಕೋಣೆಯೊಳಗೆ ಹೋಗಿ ನೋಡಿದಾಗ ಆಕೆ ಕೋಣೆಯಲ್ಲಿ ಇಲ್ಲದೆ ಇರುವುದು ಗಮನಕ್ಕೆ ಬಂತು. ಅವಳಿಗೆ ಮದುವೆ ನಿಶ್ಚಿತವಾಗಿದ್ದು ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾಳೆ ಎನ್ನುವ ಬಗ್ಗೆ ಮನೆಯವರಿಗೆ ಆತಂಕ ಉಂಟು ಮಾಡಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *