ಸುದ್ದಿ9ಬಂಟ್ವಾಳ : ಪ್ರವಾದಿ ಮತ್ತು ಪೂವರ್ಿಕರನ್ನು ಹಿಂಬಾಲಿಸುವ ನೈಜ ಮುಸಲ್ಮಾನರಾದ ಸುನ್ನಿಗಳು ತೀವ್ರವಾದ ಮತ್ತು ವಗರ್ೀಯತೆಯನ್ನು ಅಂಗೀಕರಿಸಲು ಯಾ ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ಇಸ್ಮಾಯಿಲ್ ತೋಟುಮುಕ್ಕಂ ಹೇಳಿದರು.
ಅಡ್ಯಾರ್-ಕಣ್ಣೂರಿನಲ್ಲಿ ಭಾನುವಾರ ನಡೆದ ಸಮಸ್ತ ಸಮ್ಮೇಳನ ಹಾಗೂ ಸಖಾಫಿ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಸ್ಲಾಮಿನ ಬಾಲಪಾಠವನ್ನು ಅರಿಯದ ಇಸ್ಲಾಂ ನಾಮದಲ್ಲಿ ಪ್ರವತರ್ಿಸುವ ನೂತನವಾದಿಗಳು ಹಾಗೂ ಜನರನ್ನು ದಾರಿ ತಪ್ಪಿಸುವ ಮೂಲಕ ಮುಸ್ಲಿಮರೆಡೆಯಲ್ಲಿ ಭಿನ್ನತೆಯನ್ನು ಸೃಷ್ಟಿಸಿ ಮಾಡಿ ವಿಭಜಿಸುವ ಕಾರಂದೂರಿಗಳ ಬಗ್ಗೆ ಜನರು ಜಾಗೃತರಾಗಬೇಕು ಎಂದು ಕರೆ ನೀಡಿದರು. ಇವರ ನೈಜ ಬಣ್ಣವನ್ನು ಅನಾವರಣಗೊಳಸಿವ ಮೂಲಕ ಜಾಗೃತಿಯನ್ನು ಮೂಡಿಸುವಲ್ಲಿ ಜನತೆ ಸಮಸ್ತದೊಂದಿಗೆ ಕೈಜೋಡಿಸಬೇಕೆಂದರು.
ಇದೇ ವೇಳೆ ಮಾತನಾಡಿದ ಮುಹಮ್ಮದ್ ರಾಮಂದಲಿ ಅವರು ದೀರ್ಘಕಾಲ ಜನರನ್ನು ವಂಚಿಸಲು ಸಾಧ್ಯವಿಲ್ಲ. ನೈಜತೆ ಅರಿತು ಜನ ಸತ್ಯದೆಡೆಗೆ ಮರಳುತ್ತಾರೆ ಎಂಬುದಕ್ಕೆ ಈ ಸಖಾಫಿ ಸಂಗಮದಲ್ಲಿ ಭಾಗವಹಿಸಿರುವ ಸಖಾಫಿಗಳು ಹಾಗೂ ಇಲ್ಲಿ ನೆರೆದಿರುವ ಜನಸ್ತೋಮವೇ ಸಾಕ್ಷಿ ಎಂದರು.
ಸಮಸ್ತದೆಡೆಗೆ ಬಂದ ಹಲವಾರು ಸಖಾಫಿಗಳು ಸಂಗಮವನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಬಿಡುಗಡೆಗೊಳಿಸಲಾದ ಕೇರಳ ಹಾಗೂ ಕರಾಯದಲ್ಲಿ ನಡೆದ ಸಮಸ್ತ ಸಮ್ಮೇಳನಗಳ ವೀಡಿಯೋ ಸಿಡಿಯ ಮೊದಲ ಪ್ರತಿಯನ್ನು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಅವರಿಂದ ಕೆ.ಎಸ್. ಇಸ್ಮಾಯಿಲ್ ಹಾಜಿ ಕಲ್ಲಡ್ಕ ಅವರು ಖರೀದಿಸಿದರು.





