ಪಂಜಿಕಲ್ಲು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜಯಭೇರಿ ಪಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಅಭ್ಯರ್ಥಿಗಳ ವಿಜಯೋತ್ಸವ ಭಾರೀ ವಿಜೃಂಭಣೆಯಿಂದ ನಡೆಯಿತು.
ಪ್ರಶಾಂತ ವಾತಾವರಣದಲ್ಲಿ ನಡೆದ ವಿಜಯೋತ್ಸವದ ವೇದಿಕೆಯಲ್ಲಿ ವಿಜೇತ ಅಭ್ಯರ್ಥಿಗಳಾದ ಶಶಿಕಲಾ, ಬಾಲಕೃಷ್ಣ ಪೂಜಾರಿ, ಶಾಲಿನಿ ಶ್ರೀನಿವಾಸ ಶೆಟ್ಟಿ , ಲಕ್ಷ್ಮಿನಾರಾಯಣ ಗೌಡ, ಶಾಲಿನಿ ದಯಾನಂದ, ಶ್ರೀಮತಿ ಸುಮತಿ, ಹರೀಶ ಪೂಜಾರಿ, ಸುಮಿತ್ರ ಕೈಲಾರು, ಸುಜಾತಾ, ಸಂಜೀವ ಪೂಜಾರಿ, ಪೂವಪ್ಪ ಮೆಂಡನ್, ರೂಪಶ್ರೀ, ಡಿ.ಕೇಶವ ಗೌಡ ಉಪಸ್ಥಿತರಿದ್ದರು.

ಪ್ರಮುಖರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು , ದಿನೇಶ ಭಂಡಾರಿ, ಪ್ರಕಾಶ ಅಂಚನ್, ಕರುಣೇಂದ್ರ ಪೂಜಾರಿ, ಆನಂದ ಜಿ., ಹರೀಶ್ ಶೆಟ್ಟಿ ದಂಡೆ, ಪೂರ್ಣಿಮ, ರವೀಂದ್ರ ಆಚಾರ್ಯ, ಕೆ.ಎನ್.ಶೇಖರ್, ಪುಷ್ಪರಾಜ್, ಹಾಗೂ ಎಲ್ಲಾ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.
ವಿಜಯೋತ್ಸವ ಮೆರವಣಿಗೆಯು ಭಾನುವಾರ ಸಂಜೆ 3 ಗಂಟೆಗೆ ಕೊಂಬ್ರಬೈಲಿನಿಂದ ಆಚಾರಿಪಲ್ಕೆ , ಸೊರ್ನಾಡು, ನಿಂಗಲ್ ಬಾಕಿಮಾರ್, ದಡ್ಡಲಕಾಡು ಮೂಲಕ ಸಾಗಿ ಕೊಂಬ್ರಬೈಲ್ನಲ್ಲಿ ಮುಕ್ತಾಯಗೊಂಡಿತು.
