ನವದೆಹಲಿ: ಭಾರತದಲ್ಲಿ ಮೋದಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದೆ. ಇದರ ಮೊದಲ ಹೆಜ್ಜೆಯೆಂಬಂತೆ ಭಾರತದಲ್ಲಿ ಅಮೆರಿಕನ್ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ನ್ಯಾನ್ಸಿ ಪೊವೆಲ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿದೆ. ಹೊಸ ಸರ್ಕಾರದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಲು ಒಳ್ಳೆಯ ವಾತಾವರಣದ ನಿರ್ಮಾಣಕ್ಕಾಗಿ ಅಮೆರಿಕ ತೆಗೆದುಕೊಂಡಿರುವ ಪ್ರಥಮ ಹೆಜ್ಜೆ ಇದು ಎನ್ನಲಾಗಿದೆ.

narendra-modi-with-nancy-powell

ಅಮೆರಿಕನ್ ರಾಯಭಾರಿಯಾಗಿ ನ್ಯಾನ್ಸಿ ಪೋವೆಲ್ ಕೆಲ ಮಹತ್ವದ ವಿಷಯಗಳಲ್ಲಿ ತಮ್ಮ ಸರ್ಕಾರದ ದಾರಿ ತಪ್ಪಿಸಿದರು. ನರೇಂದ್ರ ಮೋದಿ ಮತ್ತು ದೇವಯಾನಿ ಕೋಬ್ರಾಗಡೆ ಪ್ರಕರಣಗಳ ಸಂಬಂಧ ಪೋವೆಲ್ ಅವರ ಸಲಹೆಯಂತೆ ಕ್ರಮ ಕೈಗೊಂಡಿದ್ದು ಅಮೆರಿಕ ಸರ್ಕಾರಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಪರಿಸ್ಥಿತಿಯನ್ನು ಸರಿಯಾಗಿ ಅಂದಾಜಿಸದ ಪೋವೆಲ್ ತಪ್ಪು ನಿರ್ಧಾರಗಳಿಗೆ ಕಾರಣರಾದರು ಎಂಬುದು ಅಮೆರಿಕಕ್ಕೆ ತಡವಾಗಿ ಅರಿವಾದಂತಿದೆ. ಗುಜರಾತ್ ಗಲಭೆಯ ಬಳಿಕ ಅಮೆರಿಕ ಸರ್ಕಾರವು ನರೇಂದ್ರ ಮೋದಿಗೆ ವೀಸಾ ನೀಡದಿರಲು ನಿರ್ಧರಿಸಿದ್ದು ಇದೇ ನ್ಯಾನ್ಸಿ ಪೋವೆಲ್ ಸಲಹೆ ಮೇರೆಗೆ. ಸತತ ಮೂರು ಬಾರಿ ಗುಜರಾತ್’ನಲ್ಲಿ ಮೋದಿ ಅಧಿಕಾರಕ್ಕೆ ಬಂದರೂ ಅವರಿಗೆ ವೀಸಾ ನೀಡದಿರಲು ಪೋವೆಲ್ ಪಟ್ಟುಹಿಡಿದಿದ್ದರು. ಆದರೆ, ಮೋದಿ ಈ ದೇಶದ ಪ್ರಧಾನಿಯಾಗುವ ಸಾಧ್ಯತೆ ಇರುವುದನ್ನ ಮನಗಂಡ ಅಮೆರಿಕ ತನ್ನ ತಪ್ಪು ನಿರ್ಧಾರದಿಂದ ಹೊರಬರಲು ಯತ್ನಿಸುತ್ತಿದೆ.

By suddi9

Leave a Reply

Your email address will not be published. Required fields are marked *