ಬೀಜಿಂಗ್: ಮಲೇಷ್ಯಾ ವಿಮಾನ ಕಣ್ಮರೆ ಘಟನೆಯನ್ನು ನಿಭಾಯಿಸುವಲ್ಲಿ ಮಲೇಷ್ಯಾ ಸರ್ಕಾರ ಎಡವಿದೆ ಎಂದಿರುವ  ಚೀನ ತನ್ನ ಪ್ರಸಿದ್ಧ ಪತ್ರಿಕೆ ‘ಗ್ಲೋಬಲ್ ಟೈಮ್ಸ್’, ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸುವಂತೆ ಒತ್ತಾಯಿಸಿದೆ.

ಕಣ್ಮರೆಯಾಗಿದ್ದ ಮಲೇಷ್ಯಾ ವಿಮಾನ ಎಂ.ಹೆಚ್ 370 ಹುಡುಕಾಟಕ್ಕಾಗಿ ಚೀನಾ ಅಧ್ಯಕ್ಷ ಗ್ಜಿ ಜಿಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ದೂರವಾಣಿ ಮಾತುಕತೆ ನಡೆಸಿದ್ದನ್ನು ಉಲ್ಲೇಖಿಸಿ, ಸುರಕ್ಷತಾ ಕಾರ್ಯಕ್ಕೆ ಅಮೆರಿಕ ವಹಿಸಿದ್ದ ಕಾಳಜಿಯ ವಹಿಸಿದ ಬಗ್ಗೆಯೂ ಮಾತುಕತೆ ನಡೆಸಿದೆ.

air

ಈ ಘಟನೆಯಿಂದ ಮಲೇಶಿಯಾ ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದಿರುವ ಗ್ಲೋಬಲ್ ಟೈಮ್ಸ್ ಸಂಪಾದಕೀಯ, ಈ ದುರಂತವನ್ನು ಗಂಭೀರವಾಗಿ ಪರಿಗಣಿಸದ ಮಲೇಷ್ಯಾ ಸರ್ಕಾರ, ತೀರಾ ಮಂದಗತಿಯಲ್ಲಿ ಸ್ಪಂದಿಸಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಮಲೇಷ್ಯಾ ವಿಮಾನದಲ್ಲಿ ಹಾಗೂ ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಸಾಕಷ್ಟು ಲೋಪದೋಷಗಳಿಂದ ಕೂಡಿದೆ. ಒಂದ್ವೇಳೆ ವಿಮಾನದ ತಾಂತ್ರಿಕ ದೋಷ ಅಥವಾ ಪೈಲಟಿನ ಲೋಪವೇ ಈ ಘಟನೆಗೆ ಕಾರಣವಾಗಿದ್ದರೂ ಅದರ ಜವಾಬ್ದಾರಿ ಹೊರಬೇಕಾಗಿದ್ದು ಕೂಡ ಮಲೇಷ್ಯಾ ಏರ್’ಲೈನ್ಸ್.

ಇಲ್ಲವೇ, ಇದೊಂದು ಭಯೋತ್ಪಾದನಾ ಕೃತ್ಯವಾಗಿದ್ದರೆ, ಕೌಲಾಲಂಪುರ ವಿಮಾನ ನಿಲ್ದಾಣ ಹಾಗೂ ಮಲೇಷ್ಯಾ ವಿಮಾನದಲ್ಲಿನ ಭದ್ರತಾ ವ್ಯವಸ್ಥೆಯಲ್ಲಿನ ವೈಫಲ್ಯವೇ ಕಾರಣ ಎಂದು ಪ್ರತಿಪಾಧಿಸಿದೆ.

ಮಲೇಷ್ಯಾದ ಭದ್ರತಾ ವ್ಯವಸ್ಥೆಯ ವಿರುದ್ಧ ಕಿಡಿಕಾರಿರುವ ಗ್ಲೋಬಲ್ ಟೈಮ್ಸ್ ಸಂಪಾದಕೀಯ, ಈ ಘಟನೆಯಲ್ಲಿ ಭಯೋತ್ಪಾದಕರ ಕೈವಾಡವನ್ನೂ ಅಲ್ಲಗಳೆಯುವಂತಿಲ್ಲವೆನ್ನುತ್ತಾ, ಅದ್ಹೇಗೆ ನಕಲಿ ಪಾಸ್’ಪೋರ್ಟ್ ಬಳಸಿ ಇಬ್ಬರು ಪ್ರಯಾಣಿಕರು ಒಳ ಪ್ರವೇಶಿಸಿದರು ಎಂದು ಪ್ರಶ್ನಿಸಿದೆ.

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಸರ್ಕಾರಕ್ಕೆ ನಿಕಟವಾಗಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆ, ತನ್ನ ಕಟ್ಟುನಿಟ್ಟಿನ ಸಂಪಾದಕೀಯದಲ್ಲಿ ವಿವರಿಸುತ್ತಾ….., ಅದ್ಸರಿ, ನಕಲಿ ಪಾಸ್’ಪೋರ್ಟ್ ಬಳಸಿ ವಿಮಾನವೇರಿದ ಆ ಇಬ್ಬರು ಪ್ರಯಾಣಿಕರು ಯಾರು ಎಂದು ಏರುದನಿಯಲ್ಲಿ ಪ್ರಶ್ನಿಸಿದೆ.

ಅವರಿಬ್ಬರು ಯಾರು? ಯಾಕಾಗಿ ನಕಲಿ ಪಾಸ್’ಪೋರ್ಟ್ ಬಳಸಿದರು ಎಂದು ಪ್ರಶ್ನಿಸುತ್ತಾ…., ಮಲೇಷ್ಯಾದ ಭದ್ರತಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದೆ.

ಅದೆಲ್ಲಾ ಒತ್ತಟ್ಟಿಗಿರಲಿ, ಈಗಲಾದರೂ ಅವರಿಬ್ಬರ ಸಂಪೂರ್ಣ ಮಾಹಿತಿ ಸಿಕ್ಕಿತಾ ಎಂದು ಕುಟುಕುತ್ತಾ, ಇದುವರೆಗೂ ಈ ಸಂಬಂಧ ಸರಿಯಾದ ಉತ್ತರವೇ ಬಂದಿಲ್ಲವಲ್ಲಾ ಎಂದು ಸಿಡಿಮಿಡಿ ವ್ಯಕ್ತಪಡಿಸಲಾಗಿದೆ.

ಯಾವುದಾದ್ರೂ ಪ್ರಯಾಣಿಕರು ನಕಲಿ ಪಾಸ್’ಪೋರ್ಟ್ ಬಳಿಸಿಕೊಂಡು ನಿರ್ಭೀತಿಯಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆಂದರೆ ಅದರರ್ಥ, ಭದ್ರತಾ ವ್ಯವಸ್ಥೆ ತೀರಾ ಹದಗೆಟ್ಟಿರುವುದು. ಅದರಲ್ಲೂ ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ಭಿಗಿ ಭದ್ರತಾ ವ್ಯವಸ್ಥೆ ಇರಲೇಬೇಕಾಗುತ್ತದೆ.

ಪ್ರಸಕ್ತ ಕಾಲಘಟ್ಟದಲ್ಲಿ ವಿಶ್ವದಾದ್ಯಂತ ಭಯೋತ್ಪಾದಕರ ಹಾವಳಿ ಹೆಚ್ಚಾಗುತ್ತಿದ್ದು, ಅಮಾಯಕ ಜೀವಗಳನ್ನು ಹೀನಾಯವಾಗಿ ಬಲಿತೆಗೆದುಕೊಳ್ಳುವ ಮೂಲಕ ನಾಗರಿಕ ಸಮಾಜವನ್ನು ಕಲುಷಿತಗೊಳಿಸಲು ಯತ್ನಿಸುತ್ತಿವೆ.

ಅಂತಹಾ ಘನಘೋರ ಉಗ್ರವಾದಿ ಚಟುವಟಿಕೆ ಪ್ರಚಲಿತದಲ್ಲಿರುವ ಸಂದರ್ಭದಲ್ಲೂ ಭದ್ರತಾ ವ್ಯವಸ್ಥೆ ತೀರಾ ಹದಗೆಟ್ಟಿದ್ದರೆ ಏನರ್ಥವೆಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

By suddi9

Leave a Reply

Your email address will not be published. Required fields are marked *