ಬಜಪೆ: ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರು ಸಮೀಪದ ಅರಸುಲ ಪದವು ಸರಕಾರಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಕೆಂಪು ಕಲ್ಲಿನ ಕೋರೆಗೆ ಗಣಿ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದಾರೆಬಜಪೆ: ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರು ಸಮೀಪದ ಅರಸುಲೆ ಪದವು ಅಕ್ರಮ ಕೊರೆಗಳಿಗೆ ಇಂದು ಮತ್ತೋಮ್ಮೆ ಗಣಿ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದಾರೆ ಗಣಿ ಇಲಾಖಾ ಉಪ ನಿರ್ದೇಶಕರಾದ ರಾಮಪ್ಪ, ಗಣಿ ಇಲಾಖೆಯ ನಾಗೇಂದ್ರಪ್ಪ ಅಕ್ರಮ ಕೋರೆಗೆ ದಾಳಿ ನಡೆಸಿದ್ದಾರೆ, ಇದುವರೆಗೆ ಸುಮಾರು ೬ ಬಾರಿ ದಾಳಿನಡೆಸಿದ್ದು, ಸುಮಾರು ೧೦ ಲಕ್ಷಕ್ಕೂ ಮಿಕ್ಕಿ ದಂಡವನ್ನು ವಿಧಿಸಾಲಾಗಿದೆ ಆದರೆ ದಾಳಿ ನಡೆಸಿದ ಎರಡು ಮೂರು ದಿನಗಳಲ್ಲಿ ಅಕ್ರಮ ಕೋರೆಗಳು ಮರು ಪ್ರಾರಂಭವಾಗುತ್ತಿದೆ. ಅರಸುಲೆಪದವು ಪರಿಸರದಲ್ಲಿ ಸಾವಿರ ಎಕರೆ ಸರಕಾರಿ ಜಮೀನು ಇದ್ದು ಸರಕಾರಿ ಮತ್ತು ಖಾಸಗಿ ಸ್ಥಳದಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕೋರೆ ಕಾರ್ಯಾಚರಿಸುತ್ತಿದೆ, ಇಂದು ನಡೆದ ಕಾರ್ಯಾಚರಣೆಯಲ್ಲಿ ೫ ಕಲ್ಲು ತುಂಬಿದ ಲಾರಿ ೬ ಕಟ್ಟಿಂಗ್ ಯಂತ್ರ ಮುಂತಾದ ಸಾಮಗ್ರಿಗಳನ್ನು ವಶಪಡಿಸಿ ಕೊಂಡಿದ್ದಾರೆ.

ಇಲ್ಲಿನ ಆಕ್ರಮ ಕೋರೆಗಳ ಬಗ್ಗೆ ಈ ಹಿಂದೆ ಸ್ಥಳೀಯರು ದಕ್ಷಿಣ ಕನ್ನಡ ಜಿಲ್ಲಾಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಕಾರಿಗಳ ಆದೇಶದ ಮೇರೆಗೆ ತಹಸೀಲ್ದಾರ್ ನೇತೃತ್ವದ ಅಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಯನ್ನೆ ಅಗೆದು ಕೊರೆಯಾಗಿ ಪರಿವರ್ತಿಸಿದ್ದಾರೆ ಎಂದು ಆ ದಿನಗಳಲ್ಲಿ ಸ್ಥಳೀಯರು ತಹಶಿಲ್ದ್ದಾರರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಮಾತ್ರವಲ್ಲದೆ ಅನೇಕ ಬಾರಿ ಗಣಿ ಇಲಾಖಾಧಿಕಾರಿಗಳು ಕೊರೆಗೆ ದಾಳಿ ನಡೇಸಿದ್ದಾರೆ, ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ಗದ್ದಲವು ನಡೇದಿತ್ತು ಆದರೆ ಸಚಿವ ಅಭಯಚಂದ್ರ ಜೈನ್ ಅಭಯ ಹಸ್ತ್ತದಿಂದ ಯಾವುದೇ ಅಡೇ ತಡೆ ಇಲ್ಲದೆ ಕೊರೆಯು ಕಾರ್ಯ ನಿರ್ವಹಿಸುತ್ತಿದೆ ಎನ್ನಲಾಗುತ್ತಿದೆ.
DSC09465

DSC09475

DSC09487

DSC09477

By Suddi9

Leave a Reply

Your email address will not be published. Required fields are marked *