ಬಂಟ್ವಾಳ : ಶ್ರೀ ಲಕ್ಷ್ಮೀ ನರಸಿಂಹ ದೇವರ ಉಪಾಸನೆ ಮಾಡಿದಲ್ಲಿ ದೇವರು ಸಕಲ ಇಷ್ಟಾರ್ಥ ಕರುಣಿಸುತ್ತಾನೆ. ಜಗತ್ತಿಗೆ ಆಧಾರ ಸ್ತಂಭ ದೇವಸ್ಥಾನ , ಸಂಸ್ಕ್ರತಿ ಉಳಿಸಲು ಶ್ರದ್ಧಾ ಕೇಂದ್ರವಾಗುತ್ತದೆ ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳಂವರು ಆಶೀರ್ವಚನವಿತ್ತರು.
ಅವರು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕುಕ್ಕಾಜೆ ಇದರ ಷಷ್ಠಮ ಪ್ರತಿಷ್ಟಾ ವರ್ದಂತಿ ಮತ್ತು ಬಲಮುರಿ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆಯ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ನ್ಯಾಯವಾದಿ ಚಿದಾನಂದ ರಾವ್ ಪತ್ತುಮುಡಿ , ಭಾಸ್ಕರ್ ಕುಲಾಲ್ ಅಧ್ಯಕ್ಷರು ಕುಲಾಲ ಸಂಘ ಇರಾ ಮಂಚಿ, ಕೆ.ಸತೀಶ್ ಕುಕ್ಕಾಜೆಬೈಲು ಉಪಸ್ಥಿತರಿದ್ದರು. ಧರ್ಮ ಜಾಗರಣಾ ಪ್ರತಿಷ್ಠಾನ ಸಂಚಾಲಕ ಕೈಯೂರು ನಾರಾಯಣ ಭಟ್ ಪ್ರಸ್ತಾವನೆಗೈದರು . ಸಂದೇಶ್ ಕುಕ್ಕಾಜೆ ಸ್ವಾಗತಿಸಿದರು. ಸಂಜಿತ್ ಕುಕ್ಕಾಜೆ ವಂದಿಸಿ ಕೆ.ತಿರುಮಲೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

