ಬಂಟ್ವಾಳ : ಶುಕ್ರವಾರ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳ 804 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮತದಾನಕ್ಕಾಗಿ ತಾಲೂಕಿನಲ್ಲಿ 315 ಮತಗಟ್ಟೆಗಳು ಸಜ್ಜಾಗಿದೆ. ಒಟ್ಟು 837 ಸ್ಥಾನಗಳ ಪೈಕಿ 33 ಮಂದಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 804 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 1825 ಮಂದಿ ಕಣದಲ್ಲಿ ಉಳಿದಿದ್ದಾರೆ.
ಚುನಾವಣಾ ಕಾರ್ಯಕ್ಕೆ ತಾಲೂಕಿನಲ್ಲಿ ಒಟ್ಟು 1398 ಇಲಾಖಾ ಸಿಬಂದಿಗಳು, 57 ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳು ಗುರುವಾರ ಸಂಜೆಯೇ ನಿಯೋಜಿತ ಮತಗಟ್ಟೆಗಳಿಗೆ ತೆರಳಿದ್ದಾರೆ.
315 ಮತಗಟ್ಟೆಗಳ ಪೈಕಿ 55 ನ್ನು ಸೂಕ್ಷ ಮತಗಟ್ಟೆ ಮತ್ತು 58ನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಉಳಿದವುಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಹೇಳಲಾಗಿದೆ. ಈ ಮತಗಟ್ಟೆಗಳಿಗೆ 347 ಪಿಆರ್ಒ, 347 ಎಪಿಆರ್ಒ, 704 ಪೊಲಿಂಗ್ ಆಫೀಸರ್ಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ 11 ಮತಗಟ್ಟೆಗಳು ಅವಿರೋಧ ಆಯ್ಕೆ ಕಾರಣವಾಗಿ ಚುನಾವಣೆ ರಹಿತವಾಗಿದೆ.
ಮತಗಟ್ಟೆ ಕಡೆಗೆ ಸಿಬ್ಬಂದಿಗಳ ನಡೆ..
ತಾಲೂಕಿನ ಮೊಡಂಕಾಪು ಇನ್ಫೆಂಟ್ ಜೇಸಸ್ ಶಾಲಾ ಆವ ರಣದಿಂದ ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗಳನ್ನು ಬೀಳ್ಕೊಡಲಾಯಿತು. ಶುಕ್ರವಾರ ನಡೆಯುವ ಗ್ರಾ.ಪಂ.ಚುನಾವಣೆ ಗೆ ಗುರುವಾರ ಬೆಳಿಗ್ಗೆಯೇ ಮನೆಬಿಟ್ಟ ಸಿಬ್ಬಂದಿಗಳು ಮೊಡಂಕಾಪುಗೆ ಆಗಮಿಸಿ ತಮ್ಮ ನಿಯೋಜನೆಯ ಸ್ಥಳವನ್ನು ಪಟ್ಟಿಯಲ್ಲಿ ಹುಡುಕುತ್ತಿರುವ ದೃಶ್ಯಗಳು ಕಂಡುಬಂತು. ಚುನಾವಣಾ ಅಧಿಕಾರಿಗಳು ನೀಡಿದ ಮತಪೆಟ್ಟಿಗೆ, ಲಕೋಟೆ, ಪೇಪರ್, ಮತದಾರರ ಪಟ್ಟಿ, ರಬ್ಬರ್ ಬ್ಯಾಂಡ್, ವೇಸ್ಟ್ ಬಟ್ಟೆ, ಗುಂಡುಪಿನ್ನು, ಶಾಯಿಯ ಜೊತೆಯಲ್ಲಿ ಸಿಬ್ಬಂದಿಗಳು ಬಸ್ಸು-ಜೀಪು ಏರುತ್ತಿದ್ದ ದೃಶ್ಯಗಳು ಕಂಡುಬಂತು.
DSC_6454

DSC_6455

DSC_6457

 

DSC_6460

147 ವಾಹನಗಳು..
ಚುನಾವಣಾ ಕರ್ತವ್ಯಕ್ಕೆ ಸಿಬಂದಿಗಳು ಆಯಾ ಕೇಂದ್ರಗಳಿಗೆ ತೆರಳುವುದಕ್ಕೆ 43 ಕೆಎಸ್ಆರ್ಟಿಸಿ ಬಸ್,11 ಮಿನಿಬಸ್, 58 ಜೀಪು ಹಾಗೂ 35 ಮ್ಯಾಕ್ಸಿ ಕ್ಯಾಬ್ಗಳನ್ನು ನಿಯೋಜಿಸಲಾಗಿದೆ ಎಂದು ವಹನಗಳ ಉಸ್ತುವಾರಿ ಅಧಿಕಾರಿ ಗುರುನಾಥ್ ಬಾಗೇವಾಡಿ ತಿಳಿಸಿದ್ದಾರೆ.
ಭಾರೀಭದ್ರತೆ.
ತಾಲೂಕಿನ ಮತಗಟ್ಟೆಗಳ ಪೈಕಿ ಸೂಕ್ಷ ಮತಗಟ್ಟೆಗಳಿಗೆ ಹೆಚ್ಚುವರಿ ಗೃಹರಕ್ಷಕ ಮತ್ತು ಒರ್ವ ಪೊಲೀಸ್, ಅತಿಸೂಕ್ಷ ಮತಗಟ್ಟೆಗೆ ಓರ್ವ ಪೊಲೀಸ್ ಮತ್ತು ಒಬ್ಬರು ಎಎಸ್ಐ ಮಟ್ಟದ ಸಿಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳ ಭದ್ರತೆಗಾಗಿ ಹೊರ ಜಿಲ್ಲೆಗಳಿಂದ 135 ಗೃಹರಕ್ಷಕ ದಳದ ಸಿಬ್ಬಂದಿಗಳು, 315 ಸಿವಿಲ್ ಪೊಲೀಸ್ ರ ನಿಯೋಜನೆ ಮಾಡಲಾಗಿದ್ದು, ಒಟ್ಟು ಭದ್ರತಾ ವ್ಯವಸ್ಥೆಗೆ ಹೊರ ಜಿಲ್ಲೆಯ ಐವರು ಸಬ್ ಇನ್ಸ್ ಪೆಕ್ಟರ್, ಜಿಲ್ಲೆಯ 9ಮಂದಿ ಸಬ್ ಇನ್ಸ್ಪೆಕ್ಟರ್ ಸೇರಿ ಒಟ್ಟು 14 ಮಂದಿಯನ್ನು ನಿಯೋಜಿಸಲಾಗಿದೆ. ಒಬ್ಬರು ವೃತ್ತ ನಿರೀಕ್ಷಕರು, ಒಬ್ಬರು ಎಎಸ್ಪಿ ಮಟ್ಟದ ಅಧಿಕಾರಿ ಬಲದೊಂದಿಗೆ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಭ್ಯಥರ್ಿಗಳ ಭವಿಷ್ಯ ಬರೆಯಲಿದ್ದಾರೆ ಮತದಾರರು..
ತಾಲೂಕಿನಲ್ಲಿ ಈ ಬಾರಿ ಹೊಸದಾಗಿ ವಿಂಗಡನೆಯಾಗಿರುವ 12 ಪಂಚಾಯತ್ ಗಳು ಸೇರಿ ಗ್ರಾ.ಪಂ.ಗಳ ಸಂಖ್ಯೆ 59 ಕ್ಕೇರಿದೆ. ಈ ಪೈಕಿ 57 ಗ್ರಾಮಪಂಚಾಯತ್ಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 2,48,153 ಮತದಾರರು 1825 ಮಂದಿ ಅಭ್ಯಥರ್ಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಮತದಾರರ ಪೈಕಿ 1,24,805 ಪುರುಷ ಹಾಗೂ 1,23,348 ಮಹಿಳಾ ಮತದಾರರಿದ್ದಾರೆ.

ಚಿತ್ರ;ಕಿಶೋರ್ ಪೆರಾಜೆ

By Suddi9

Leave a Reply

Your email address will not be published. Required fields are marked *