ಬಂಟ್ವಾಳ:ಬಿ.ಸಿರೋಡಿನಲ್ಲಿ ಖಾಸಗಿ ಬಸ್ಸುಗಳ ಕರ್ಕಶ ಹಾರ್ನ್ನ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಕಿವಿಮುಚ್ಚಿಕೊಂಡೆ ನಿಂತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಸರಪಾಡಿ, ಮೂಡಬಿದ್ರೆ, ವಾಮದಪದವು, ಮುಡಿಪು, ಕಡೆಯಿಂದ ಬರುವ ಖಾಸಗಿ ಬಸ್ಸುಗಳ ಸಹಿತ ಕೆಲವು ಸಿಸಿ ಬಸ್ಸುಗಳಲ್ಲಿ ಅಳವಡಿಸಲಾದ ಕರ್ಕಶ ಹಾರ್ನ್ ನಿಂದಾಗಿ ಬಿ.ಸಿರೋಡು ಸರ್ವೆಸ್ ರಸ್ತೆಯ ಬಸ್ಸು ತಂಗುದಾಣದಲ್ಲಿ ನಿಲ್ಲುವ ಪ್ರಯಾಣಿಕರ ಸಹಿತ ಅಕ್ಕಪಕ್ಕದ ಅಂಗಡಿ ಹೊಂದಿರುವರು ತಮ್ಮ ಕಿವಿಗೆ ಹತ್ತಿಯನ್ನು ಇಟ್ಟು ಕುಳಿತುಕೊಳ್ಳಬಹುದಾದ ಪರಿಸ್ಥಿತಿ ಉಂಟಾಗಿದೆ.

images (1)
ಬಸ್ಸುಗಳ ಕರ್ಕಶ ಹಾರ್ನ್  ಶಬ್ಧಮಾಲಿನ್ಯ ಉಂಟಾಗಿ ಜನಸಾಮಾನ್ಯರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.. ಬಿ.ಸಿರೋಡಿನ ಸರ್ವೆಸ್ ರಸ್ತೆಯಲ್ಲಿ ಮಂಗಳೂರು ಕಡೆಗೆ ಹೋಗುವ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸುವ ಮತ್ತು ಇಳಿಸುವ ಸಂದರ್ಭದಲ್ಲಿ ತಡೆ ಉಂಟಾಗುತ್ತಿದ್ದು ಈ ವೇಳೆ ಹಿಂಬದಿಯಿಂದ ಬರುವ ಬಸ್ಸುಗಳು ಮುಂದಕ್ಕೆ ಚಲಿಸುವ ನಿಟ್ಟಿನಲ್ಲಿ ವಿಪರೀತವಾಗಿ ಹಾರ್ನ್  ಹಾಕುತ್ತಿರುವುದರಿಂದ ಶಬ್ಧಮಾಲಿನ್ಯ ಉಂಟಾಗುತ್ತಿದೆ. ಮಂಗಳೂರಿನಂತಹ ನಗರ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಆರ್.ಟಿ.ಒ ಇಲಾಖೆಯೂ ಕರ್ಕಶ ಹಾರ್ನ್  ಅಳವಡಿಸಿರುವ ಬಸ್ಸುಗಳ ವಿರುದ್ಧ ಕಾರ್ಯಚರಣೆ ನಡೆಸಿ ಅಂತಹ ಹಾರ್ನ್ಗಳನ್ನು ಕಿತ್ತು ಹಾಕುವ ಕಾರ್ಯ ನಡೆಯುತ್ತಿದೆ ಆದರೆ ಬಿ.ಸಿರೋಡಿನಂತಹ ನಗರ ಪ್ರದೇಶದಲ್ಲೂ ಕರ್ಕಶ ಹಾರ್ನ್  ಬಳಸುತ್ತಿರುವ ಬಸ್ಸುಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡ ಉದಾಹರಣೆಯಿಲ್ಲವೆಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಬಂಟ್ವಾಳ ಟ್ರಾಫಿಕ್ ಪೊಲೀಸರು ಕರ್ಕಶ ಹಾರ್ನ್  ಅಳವಡಿಸಿರುವ ಬಸ್ಸುಗಳ ವಿರುದ್ಧ ಕ್ರಮಕೈಕೊಳ್ಳಬೇಕೆಂಬ ಕೂಗು ಕೇಳಿಬಂದಿದ್ದು ತನ್ಮೂಲಕ ಶಬ್ಧಮಾಲಿನ್ಯ ತಡೆಗಟ್ಟಬೇಕೆಂಬ ಅಗ್ರಹ ಒತ್ತಾಯ ಹೆಚ್ಚಾಗಿದೆ.

By Suddi9

Leave a Reply

Your email address will not be published. Required fields are marked *