narikombu srI Saneeswara poojenarikombu srI Saneeswara pooje

ಸುದ್ದಿ9 ಬಂಟ್ವಾಳ : ನರಿಕೊಂಬು ಗ್ರಾಮ ವಿಕಾಸ ಸಮಿತಿ ವತಿಯಿಂದ 14ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯು ಮಾ.29ರಂದು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವರ ಸನ್ನಿಧಿಯಲ್ಲಿ ಜರಗಿತು.

narikombu srI Saneeswara pooje
narikombu srI Saneeswara pooje

ಬಳಿಕ ನಡೆದ ಧಾರ್ಮೀಕ ಚಿಂತನಾ ಸಭೆಯಲ್ಲಿ ಧಾರ್ಮಿಕ ಬೌದ್ಧಿಕ್ ಉಪನ್ಯಾಸ ನೀಡಿದ ಕರ್ನಾಟಕ ಭಾರತ್ ಸ್ವಾಭಿಮಾನಿ ಟ್ರಸ್ಟ್ನ ಯುವ ಭಾರತ್ ರಾಜ್ಯ ಪ್ರಭಾರಿ ನಿಕೇತ್ರಾಜ್ ಮಾತನಾಡಿ ಸಹಸ್ರಾರು ವರ್ಷಗಳ ಉಜ್ವಲ ಇತಿಹಾಸವಿರುವ ನಮ್ಮ ಮಾತೃಭೂಮಿ, ಭಾಷೆ, ಸಂಸ್ಕೃತಿ, ದೇವತೆ, ಜ್ಞಾನ-ವಿಜ್ಞಾನ, ಆಧ್ಯಾತ್ಮ, ನಾಗರಿಕತೆಗಳನ್ನು ಜಗತ್ತಿಗೆ ನೀಡಿದ ಜಗದ್ಗುರು ಭಾರತ. ಭಯೋತ್ಪಾದಕತೆಯಿಂದ ತತ್ತರಿಸಿದ 46 ಸಂಸ್ಕೃತಿಗಳ ಜನಾಂಗಕ್ಕೆ ಆಶ್ರಯವಿತ್ತ ವಿಶ್ವಾಸಯ ಸಮಾಜ ಹಿಂದೂ ಸಮಾಜ. ಅಂತಹ ಹಿಂದೂ ಸಮಾಜ ತನ್ನ ದೌರ್ಬಲ್ಯಗಳನ್ನು ಕಿತ್ತೆಸೆದು ಸ್ವಾಭಿಮಾನಿ ಸಂಘಟಿತ ಶಕ್ತಿಶಾಲಿ ಸಮಾಜವಾಗಿ ಎದ್ದುನಿಲ್ಲಬೇಕಾಗಿದೆ. ಆ ಮೂಲಕ ಜಗತ್ತಿನೆಲ್ಲ ಸವಾಲುಗಳಿಗೆ ಉತ್ತರನೀಡಬಲ್ಲ ಪರಮ ವೈಭವ ಭಾರತ ನಿರ್ಮಾಣದ ಸಂಕಲ್ಪ ತೊಡೋಣ ಎಂದು ಕರೆಇತ್ತರು.
ದಿಕ್ಸೂಚಿ ಭಾಷಣ ಮಾಡಿದ ವಕೀಲರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು, ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರಸಾದ್ ಪಿ. ಮಾತನಾಡಿ ಆಧ್ಯಾತ್ಮದ ಅಡಿಪಾಯದಲ್ಲಿ ಸಂಸ್ಕೃತಿಯ ಕಂಪಿನೊಂದಿಗೆ ವಿಜ್ಞಾನದ ಸಾಧನೆ ಸಮಾಜವನ್ನು ಶಕ್ತಿ ಸಂಪನ್ನಗೊಳಿಸಲಿ ಎಂದು ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ನರಿಕೊಂಬು ನಾಗರಿಕ ಜನಜಾಗೃತಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಎನ್.ಪದ್ಮನಾಭ ಮಯ್ಯ ಮಾತನಾಡಿ ಪ್ರಜಾಪ್ರಭುತ್ವದ ಪರಿಕಲ್ಪನೆಯ ಮೂಲಕ ರಾಜಕೀಯ ಮೌಲ್ಯವನ್ನು ಧರ್ಮ ಜಾಗೃತಿಯ ಆಧಾರದಲ್ಲಿ ಜಾಗೃತಗೊಳಿಸುವಂತಹ ಕೆಲಸ ಪ್ರತಿಯೊಬ್ಬ ಹಿಂದೂವಿನಿಂದ ಆಗಬೇಕು ಎಂದು ಹೇಳಿದರು.
ಮೊಗರ್ನಾಡು ಲಕ್ಷ್ಮೀನರಸಿಂಹ ದೇವಸ್ಥಾನ ಆಡಳಿತ ಮೊಕ್ತೇಸರ ಎಂ.ಜನಾರ್ಧನ ಭಟ್, ವೇದಮೂರ್ತಿ ಚ್.ರಾಜ್ ಗೋಪಾಲಾಚಾರ್ಯ, ಉದ್ಯಮಿ ಎಂ.ಕೃಷ್ಣಾನಂದ ಮಾಣಿಮಜಲು, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ನಿವೃತ್ತ ಮುಖ್ಯೋಪಾಧ್ಯಾಯರು ನಾಟಿ ಕೃಷ್ಣರಾಜ ಶೆಟ್ಟಿ, ಪಲ್ಲಮಜಲು ಶ್ರೀರಾಮ ಭಕ್ತಾಂಜನೆಯ ಭಜನಾ ಮಂದಿರದ ಅಧ್ಯಕ್ಷ ಆನಂದ ಕುಲಾಲ್, ಬಿಜೆಪಿ ಮಂಡಲ ಸಮಿತಿ ಕಾರ್ಯದಶರ್ಿ ಆನಂದ ಎಡ್ತೂರು, ಸಮಿತಿ ಗೌರವಾಧ್ಯಕ್ಷ ರಘು ಸಪಲ್ಯ ಹಾಗೂ ಅಧ್ಯಕ್ಷ ನವನೀತ್ ಪುತ್ರೋಟಿಬೈಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಸ್ವಾಗತಿಸಿ, ವಸಂತ ಭೀಮಗದ್ದೆ ವಂದಿಸಿದರು. ರಾಧಾಕೃಷ್ಣ ಅಡ್ಯಂತ್ತಾಯ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *