ಉಳ್ಳಾಲ: ಹರಿದ್ವಾರ ದರ್ಶನಕ್ಕೆಂದು ತೆರಳಿದ ಉಳ್ಳಾಲದ ಮಹಿಳೆಯೊಬ್ಬರು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಿ ವಿಧಿವಶರಾದ ಘಟನೆ ಭಾನುವಾರ ದೆಹಲಿಯಲ್ಲಿ ನಡೆದಿದ್ದು ಮೃತರ ಪಾರ್ಥಿವ ಶರೀರವನ್ನು ದೆಹಲಿಯಂದ ಮಂಗಳೂರಿಗೆ ವಿಮಾನದ ಮೂಲಕ ಕರೆತರುವಲ್ಲಿ ಸಚಿವ ಯು.ಟಿ. ಖಾದರ್ ಅವರು ಮಾನವೀಯತೆ ಮೆರೆದಿದ್ದಾರೆ. ಸಚಿವರ ಹೃದಯವಂತಿಕೆಗೆ ಉಳ್ಳಾಲದ ಸುiನ ಪೈ ಅವರ ಕುಟುಂಬ ಕೃತಜ್ಞತೆ ಸಲ್ಲಿಸಿದೆ.
ಮಂಗಳೂರಿನಿಂದ ಹರಿದ್ವಾರಕ್ಕೆಂದು ಶ್ರೀಕರಕಿಣಿಯವರ ನೇತೃತ್ವದಲ್ಲಿ ತೆರಳಿದ್ದ ೧೫ಮಂದಿಯ ತಂಡದಲ್ಲಿದ್ದ ಉಳ್ಳಾಲದ ಸುiನಾ ಪೈ(೬೦) ಅವರು ಕಳೆದ ವಾರ ಪ್ರಯಾಣ ಹೊರಟಿದ್ದು ದೆಹಲಿಯ ವಾತಾವರಣಕ್ಕೆ ಒಗ್ಗಿಕೊಳ್ಳದೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯವಾದ ಹಿನ್ನೆಲೆಯಲ್ಲಿ ವಿಧಿವಶರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದವಾರ ಸುಮನಾ ಪೈ ಅವರಿಗೆ ಪ್ರಯಾಣದಲ್ಲಿ ದೆಹಲಿಯ ಆಹಾರ ಪಥ್ಯವಾಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು ಅದೇ ಹಿನ್ನೆಲೆಯಲ್ಲಿ ಜ್ವರವೂ ಬಂದಿತ್ತು ಎನ್ನಲಾಗಿದೆ. ಆರೋಗ್ಯ ಹದೆಗೆಡುತ್ತಿದ್ದಂತೆಯೇ ದೆಹಲಿಯ ರಾಜೇಂದರ್ ನಗರದ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆಸ್ಪತ್ರೆಗೆ ಸಾಗಿಸುವಾಗಲೇ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.
ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ ೧೧.೩೦ಕ್ಕೆ ದೆಹಲಿಯಿಂದ ಏರ್ ಇಂಡಿಯಾ ವಿಮಾನ ಮೂಲಕ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿದ್ದು ಸಂಜೆ ಉಳ್ಳಾಲ ಅಬ್ಬಕ್ಕ ಸರ್ಕಲ್‌ನಲ್ಲಿರುವ ಮನೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
*ಆಸ್ಪತ್ರೆಗೆ ದಾಖಲಿಸುವಾಗ ೫ಸಾವಿರ ರೂ. ಗಳನ್ನು ಕಟ್ಟಲಾಗಿದ್ದು ಬಳಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರಿಂದ ಹೆಚ್ಚಿನ ಬಿಲ್ ಕಟ್ಟಬೇಕೆಂಬ ಆತಂಕದಲ್ಲಿದ್ದ ಕುಟುಂಬಕ್ಕೆ ಸಚಿವರ ಆಪ್ತರು ಯಾವುದೇ ಶುಲ್ಕವನ್ನು ಭರಿಸದಂತೆ ನೋಡಿಕೊಂಡರು.
*ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ೮.೦೦ರ ಒಳಗಡೆ ಪಾರ್ಥಿವ ಶರೀರ ಮುಟ್ಟಿಸಬೇಕಾದ ಜವಬ್ದಾರಿ ಇದ್ದ ಕುಟುಂಬಕ್ಕೆ ಸಚಿವರ ಆಪ್ತರು ಸಹಾಯ ಮಾಡಿದರು. ಹಾಗಾಗಿ ಸೋಮವಾರ ಬೆಳಗ್ಗೆ ೭.೩೦ರ ಹೊತ್ತಿಗೆ ವಿಮಾನ ನಿಲ್ದಾಣದಲ್ಲಿ ಸುಮಾರ ಅವರ ಮೃತ ದೇಹವನ್ನು ತಲುಪಿಸುವ ಕಾರ್ಯ ಯಶಸ್ವಯಾಗಿತ್ತು.
*ಕ್ಯಾಬಿನೆಟ್ ನಲ್ಲಿ ಭಾಗವಹಿಸುವ ಅನಿವಾರ್ಯತೆ ಇದ್ದರೂ ಸ್ವಕ್ಷೇತ್ರದ ಮಹಿಳೆಯ ಸಾವಿನಿಂದ ಸಚಿವರು ಕಂಗಾಲಾಗಿದ್ದು ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ನುಡಿದಂತೆ ನಡೆದಿದ್ದಾರೆ.
*ಸಚಿವರ ಶಿಫಾರಸಿನಂತೆ ಮುಂಗಡವಾಗಿ ಆಸ್ಪತ್ರೆಯಲ್ಲಿ ಭರಿಸಿದ್ದ ೫ಸಾವಿರ ರೂ. ಸುಮನಾ ಪೈ ಅವರ ಕುಟುಂಬಕ್ಕೆ ಮರಳಿಸಲಾಗಿದೆ.
*ಎಲ್ಲ ವ್ಯವಸ್ಥೆಗಳಿಗೂ ಸಚಿವರು ಬೆಂಗಳೂರಿನಿಂದ ನಿರಂತರ ಫೋನ್ ಕಾಲ್ ಮೂಲಕ ಸಹಕರಿಸಿದ್ದರು.
*ಮೃತರ ಆಳಿಯ ದೆಹಲಿಯ ಆಸ್ಪತ್ರೆಗೆ ತಲುಪಿದಾಗ ಅವರು ಕೇವಲ ಸಹಿ ಹಾಕುವ ಕೆಲಸವಷ್ಟೇ ಉಳಿದಿತ್ತು. ಮಿಕ್ಕೆಲ್ಲ ಕೆಲಸವನ್ನು ಸಚಿವರ ಆಪ್ತರು ನಿಭಾಯಿಸಿದ್ದರು.
*ಸುಮನಾ ಪೈ ಅವರಿಗೆ ಮೂರು ಹೆಣ್ಣು ಒಬ್ಬ ಪುತ್ರ. ಪುತ್ರ ನಿರುದ್ಯೋಗಿ.


