ತೊಕ್ಕೊಟ್ಟು: ಕುತ್ತಾರು ಸಮೀಪದ ಕುಕ್ಕುದಕಟ್ಟೆ ನಿವಾಸಿ ಬಿ. ವಿಶ್ವಂಭರ ಭಂಡಾರಿ(೭೬)ಅವರು ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಭಾರತೀಯ ಭೂಸೇನೆಯಲ್ಲಿ ಸಹಾಯಕ ಗ್ಯಾರೇಜಿಯನ್ ಇಂಜಿನಿಯರ್(ಎಜಿಇ) ಆಗಿ ೩೨ವರುಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಅಂಡಮಾನ್ ನಿಕೋಬರ್ನಲ್ಲಿಯೂ ಸೇವೆ ಸಲ್ಲಿಸಿದ್ದರು. ಗುಜರಾತ್ನಲ್ಲಿ ಸೇವೆ ಸಲ್ಲಿಸಿ ಬಳಿಕ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಮೆನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.
