ಸುದ್ದಿ9 ಬಂಟ್ವಾಳ: ಬಡತನಕ್ಕೆ ಜಾತಿ ಇಲ್ಲ. ಬಡತನ ಪಾಪವೂ ಅಲ್ಲ. ಎಲ್ಲಾ ವರ್ಗದ, ಧರ್ಮದ ಬಡವರಿಗೆ ಶಕ್ತಿಯನ್ನು ಕೊಡಬೇಕು. ನಿಜವಾಗಿಯೂ ಅದುವೇ ಪರಮಾತ್ಮನ ಕೆಲಸ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಹೇಳಿದರು.

bantwal congres matha prachara
bantwal congres matha prachara

 

4

5
ಅವರು ಸೋಮವಾರ ಪಚ್ಚಿನಡ್ಕದಲ್ಲಿರುವ ಶುಭ ಬೀಡಿ ಕಾರ್ಮಿಕರಲ್ಲಿ ಮತಯಾಚಿಸಿ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ತೆರಿಗೆ ಹೆಚ್ಚು ಮಾಡದಂತೆ ಮಾತನಾಡಿದರೆ ನನ್ನ ಮೇಲೆ ಕೇಸ್ ಹಾಕುತ್ತಾರೆ. ಬ್ರಾಹ್ಮಣ, ಗೌಡಸಾರಸ್ವತ ಬ್ರಾಹ್ಮಣರಿಗೆ ಮೀಸಲಾತಿ ನೀಡುವ ಬಗ್ಗೆ ಮಾತನಾಡಿದರೂ ಕೇಸು ಹಾಕುತ್ತಾರೆ. ಈ ವರ್ಗದವರಲ್ಲೂ ಬಡವಿರಲ್ಲವೇ? ಆ ಜಾತಿಯ ಬಡವರನ್ನು ರಕ್ಷಿಸುವುದು ಧರ್ಮ ಅಲ್ಲವೇ? ಎಂದ ಪೂಜಾರಿಯವರು ಇದಕ್ಕೆಲ್ಲಾ ಅಂಜದೆ ಶೋಷಿತರ ಪರವಾಗಿ ಎಂದಿಗೂ ಧ್ವನಿಯಾಗಿರುತ್ತೇನೆ. ಪೂಜಾರಿಯ ಗೆಲುವು ಜನರ ಗೆಲುವು ಎಂದು ನುಡಿದರು.
ಶುಭ ಬೀಡಿಯ ಮಾಲಕ ಸೇಸಪ್ಪ ಕೋಟ್ಯಾನ್ ಅವರನ್ನು ಬೇಟಿ ಮಾಡಿ ಮತಯಾಚಿಸಿದರು. ಪಕ್ಷದ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಚಂದ್ರಪ್ರಕಾಶ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಪಿಯೂಸ್ ಎಲ್. ರೋಡ್ರಿಗಸ್, ಬೇಬಿ ಕುಂದರ್, ಸದಾಶಿವ ಬಂಗೇರ, ಎಫ್ರಂ ಸಿಕ್ವೇರಾ, ಜಗದೀಶ ಕುಂದರ್, ಪ್ಲೋಸಿ ಡಿಸೋಜಾ, ಮಧುಸೂದನ್ ಶೆಣೈ, ಭುವನೇಶ್ ಪಚ್ಚಿನಡ್ಕ ಹಾಜರಿದ್ದರು.

By suddi9

Leave a Reply

Your email address will not be published. Required fields are marked *