ಕೃಷ್ಣರಾಜಪೇಟೆ. ತಾಲೂಕಿನ ಮುಸ್ಲಿಂ ಸಮಾಜದ ಮುಖಂಡರಾದ ಉಮ್ಮರ್ಬೇಗ್ ಅವರ ಮೊಮ್ಮಗ ಮೈಸೂರಿನ ಸದ್ವಿದ್ಯಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಿಸ್ಬಾಉರ್ ರೆಹಮಾನ್ ಅವರು ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 584 ಅಂಕಗಳನ್ನು ಪಡೆದು ಉನ್ನತಶ್ರೇಣಿಯಲ್ಲಿ ಉತ್ತೀರ್ಣನಾಗುವ ಮೂಲಕ ತಾಲೂಕಿನ ಕೀರ್ತಿಯನ್ನು ಬೆಳಗಿದ್ದಾನೆ. ಶಾಸಕ ನಾರಾಯಣಗೌಡ ಅವರು ಪ್ರತಿಭಾವಂತ ವಿದ್ಯಾರ್ಥಿಯಾದ ಮಿಸ್ಬಾಉರ್ ರೆಹಮಾನ್ಗೆ ಸಿಹಿ ತಿನ್ನಿಸಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
12
ಮಿಸ್ಬಾಉರ್ ರೆಹಮಾನ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 584 ಅಂಕಗಳನ್ನು ಪಡೆದು ಉನ್ನತಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದು, ಆಂಗ್ಲಬಾಷೆಯಲ್ಲಿ-94, ಸಂಸ್ಕೃತದಲ್ಲಿ-97, ಭೌತಶಾಸ್ತ್ರದಲ್ಲಿ-99, ರಾಸಾಯನಶಾಸ್ತ್ರದಲ್ಲಿ 98, ಗಣಿತದಲ್ಲಿ-98 ಮತ್ತು ಜೀವಶಾಸ್ತ್ರದಲ್ಲಿ-98 ಅಂಕಗಳನ್ನು ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾನೆ. ಮುಂದೆ ವೈದ್ಯಕೀಯ ಪದವಿಯನ್ನು ಪಡೆದು ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಉತ್ತಮವಾದ ಸೇವೆಯನ್ನು ಸಲ್ಲಿಸಬೇಕೆಂಬ ಮಹದಾಸೆಯನ್ನು ಹೊತ್ತಿರುವ ಮಿಸ್ಬಾನಿಗೆ ಶಾಸಕರು ಆಲ್ ದ ಬೆಸ್ಟ್ ಹೇಳಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಉಮ್ಮರ್ಬೇಗ್, ತಾ.ಪಂ ಮಾಜಿಅಧ್ಯಕ್ಷ ಜಾನಕೀರಾಂ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಉಪಸ್ಥರಿತರಿದ್ದರು.

By Suddi9

Leave a Reply

Your email address will not be published. Required fields are marked *